ಉಡುಪಿ: ಈಗ ಎಲ್ಲೆ ನೋಡಿದರೂ ಚಿಲ್ಲರೆಯ ಸಮಸ್ಯೆ. ಹೋಟೆಲ್ , ಬಸ್ ಹೀಗೆ ಎಲ್ಲೆಂದರಲ್ಲಿ ಚಿಲ್ಲರೆ ಇಲ್ಲದಿದ್ದರೆ ವ್ಯವಹಾರ ಮಾಡುವುದೇ ಕಷ್ಟಕರ. ಅದರಲ್ಲೂ ಈಗ ಹೋಟೆಲ್ ನವರು, ಅಂಗಡಿಯವರು ಈ ಚಿಲ್ಲರೆ ಬದಲಾಗಿ ಚಾಕೋಲೇಟ್ ಕೊಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಕಿರಿಕಿರಿಯಾದರೂ ಏನು ಮಾಡುವುದಕ್ಕೆ ಆಗುತ್ತಿಲ್ಲ.
ಅದೇ ಹೋಟೆಲ್ ನವರು ನಾವು ಚಿಲ್ಲರೇ ಬದಲು ಚಾಕೊಲೇಟ್ ಕೊಟ್ಟರೆ ತೆಗೆದುಕೊಳ್ಳುತ್ತಾರಾ? ಎಂದು ಸುಮಾರು ಜನ ಕೇಳುತ್ತಾರೆ. ಚಿಲ್ಲರೆ ಇಟ್ಟುಕೊಳ್ಳುವುದು ಹೋಟೆಲ್, ಅಂಗಡಿಯವರ ಕರ್ತವ್ಯ. ಗ್ರಾಹಕರಿಗೆ ಚಿಲ್ಲರೆ ಬದಲು ಚಾಕೊಲೇಟ್ ಕೊಡುವುದರ ಕುರಿತು ಯೋಗೀಶ್ ಎಂ. ಶೆಟ್ಟಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡ ವೀಡಿಯೋ ತುಣುಕೊಂದು ಇಲ್ಲಿದೆ ನೋಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ