ಹೋಟೆಲ್ ಊಟ ಮಾಡೋರಿಗೆ ಕೊಂಚ ರಿಲೀಫ್

ಶನಿವಾರ, 7 ಅಕ್ಟೋಬರ್ 2017 (08:59 IST)
ನವದೆಹಲಿ: ಕೊನೆಗೂ ಕೇಂದ್ರ ಸರ್ಕಾರ ಜಿಎಸ್ ಟಿ ಯನ್ನು ಕಡಿತಗೊಳಿಸಿದೆ. ಇದರಿಂದಾಗಿ ಕೆಲವು ಅಗತ್ಯ ವಸ್ತುಗಳು, ಹೋಟೆಲ್ ಊಟ ಕೊಂಚ ಅಗ್ಗವಾಗಲಿದೆ.

 
ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಜಿಎಸ್ ಟಿಇ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಹೋಟೆಲ್ ಊಟ, ಮಕ್ಕಳ ಆಹಾರ ಪೊಟ್ಟಣ, ಬ್ರಾಂಡ್ ರಹಿತ ಆಯುರ್ವೇದ ಔಷಧಿ, ಪ್ಲಾಸ್ಟಿಕ್ ರಬ್ಬರ್ ವೇಸ್ಟ್, ನೂಲು, ನೆಲಕ್ಕೆ ಹಾಸುವ ಕಲ್ಲು, ಸ್ಟೇಷನರಿ ಐಟಂಗಳು ಕೊಂಚ ಅಗ್ಗವಾಗಲಿದೆ.

ಜಿಎಸ್ ಟಿ ಮಂಡಳಿಯ ನಿರ್ಧಾರವನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ. ಅತ್ತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪೆಟ್ರೋಲ್, ಡೀಸೆಲ್ ನ್ನೂ ಜಿಎಸ್ ಟಿ ಅಡಿಯಲ್ಲಿ ತರುವಂತೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ