ಎರಡು ಬಾರಿಯೂ ತಮ್ಮ ಸೂಚನೆಗೆ ಕ್ಯಾರೇ ಎನ್ನದ ಸಿಎಂ ವಿರುದ್ಧ ರಾಜ್ಯಪಾಲರಿಂದ ಕೇಂದ್ರಕ್ಕೆ ವರದಿ

ಶನಿವಾರ, 20 ಜುಲೈ 2019 (10:26 IST)
ಬೆಂಗಳೂರು: ವಿಶ್ವಾಸ ಮತ ಯಾಚನೆಗೆ ನಿನ್ನೆಎರಡು ಬಾರಿ ಗಡುವು ವಿಧಿಸಿದ್ದರೂ ಮೀರಿ ನಡೆದ ಸಿಎಂ ಕುಮಾರಸ್ವಾಮಿ ಮತ್ತು ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ರಾಜ್ಯಪಾಲ ವಜುಬಾಯ್ ವಾಲಾ ಕೇಂದ್ರಕ್ಕೆ ವರದಿ ಸಲ್ಲಿಸುವ ಸಾಧ್ಯತೆಯಿದೆ.


ನಿನ್ನೆ ಮಧ್ಯಾಹ್ನ 1.30 ರ ಗಡುವು ದಾಟಿದಾಗ ಮತ್ತೆ ಸಿಎಂಗೆ ಸೂಚನೆ ರವಾನಿಸಿದ್ದ ರಾಜ್ಯಪಾಲರು ಸಂಜೆ 6 ಗಂಟೆಗೆ ವಿಶ್ವಾಸ ಮತ ಸಾಬೀತುಪಡಿಸಲು ಸೂಚಿಸಿದ್ದರು. ಆದರೆ ಅದನ್ನೂ ಮೀರಲಾಗಿದೆ. ಹೀಗಾಗಿ ರಾಜ್ಯಪಾಲರು ಕೇಂದ್ರಕ್ಕೆ ಮಧ್ಯಂತರ ವರದಿ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇಂದು ಪ್ರಧಾನಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಈ ವಿಚಾರ ಎದುರಾಗಬಹುದಾಗಿದೆ. ಈ ವರದಿಯನ್ವಯ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದರೂ ಅಚ್ಚರಿಯಿಲ್ಲ. ಆದರೆ ಸೋಮವಾರ ವಿಶ್ವಾಸ ಮತ ಯಾಚನೆ ಮಾಡುವುದಾಗಿ ಹೇಳಿರುವುದರಿಂದ ಸದ್ಯಕ್ಕೆ ಕೇಂದ್ರ ಕಾದು ನೋಡುವ ತಂತ್ರ ಅನುಸರಿಸಲೂಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ