ಡಾ.ಕೆ. ಸುಧಾಕರ್ ಗೆಲುವು ಪಡೆಯುತ್ತಿದ್ದ ಹಾಗೇ ಪ್ರದೀಪ್‌ ಈಶ್ವರ್‌ ರಾಜೀನಾಮೆಗೆ ಹೆಚ್ಚಿದ ಒತ್ತಾಯ

sampriya

ಮಂಗಳವಾರ, 4 ಜೂನ್ 2024 (16:10 IST)
Photo By X
ಚಿಕ್ಕಬಳ್ಳಾಪುರ:  ಕಾಂಗ್ರೆಸ್‌ ಮತ್ತು ಬಿಜೆಪಿಗೆ ಭಾರೀ ಪೈಪೋಟಿಯಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿ ಡಾ.ಕೆ. ಸುಧಾಕರ್​ ಅವರು ಕಾಂಗ್ರೆಸ್​ನ ರಕ್ಷಾ ರಾಮಯ್ಯ ಎದುರು 95,863 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಇನ್ನೂ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳ ಜತೆ ಮಾತನಾಡುವಾಗ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಅವರು ಬಿಜೆಪಿ ಜೆಡಿಎಸ್‌ ಅಭ್ಯರ್ಥಿ ಸುಧಾಕರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಒಂದು ಮತ ಹೆಚ್ಚು ಪಡೆದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು.

ಸುಧಾಕರ್‌ ಅವರು ಒಂದು ವೋಟ್‌ ಜಾಸ್ತಿ ಪಡೆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸವಾಳೆಸೆದಿದ್ದ ಪ್ರದೀಪ್‌ ಈಶ್ವರ್‌ಗೆ ರಾಜೀನಾಮೆ ನೀಡುವಂತೆ ಬಿಜೆಪಿ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಅದಲ್ಲದೆ ವಿಡಿಯೋ ಟ್ರೋಲ್‌ ಮಾಡಿ, ಪ್ರಶ್ನಿಸುತ್ತಿದ್ದಾರೆ.

ಲೋಕಸಭೆ ಚುನಾವಣೆಯ ಮತ ಎಣಿಕೆಯ ಅಂತಿಮ ಘಟಕ್ಕೆ ತಲುಪುತಿದ್ದು, ಈಗಾಗಲೇ ಕಾಂಗ್ರೆಸ್‌ ಹಾಗೂ ಬಿಜೆಪಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಗೆಲುವಿನ ಸಂಪೂರ್ಣ ಚಿತ್ರಣವನ್ನು ಪಡೆದುಕೊಂಡಿದೆ.  ದೇಶದಲ್ಲಿ ಇಂಡಿಯಾ ಒಕ್ಕೂಟ 229 , ಎನ್‌ಡಿಎ 295, ಇತರೆ 19 ಸ್ಥಾನಗಳೊಂದಿಗೆ ಗೆಲುವಿನ ನಗೆ ಬೀರುತ್ತಿದೆ.  

ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್‌ 9, ಜೆಡಿಎಸ್‌ 2 ಸ್ಥಾನಗಳೊಂದಿಗೆ ಮುನ್ನುಗ್ಗುತ್ತಿದೆ.











 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ