ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆಯಿಂದ ಡ್ರೈವರ್ ಕಂಡಕ್ಟರ್ ಗಳು ಕಂಗಾಲು

ಶನಿವಾರ, 3 ಜೂನ್ 2023 (14:20 IST)
ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆಯಿಂದ ಡ್ರೈವರ್ ಕಂಡಕ್ಟರ್ ಗಳು ಕಂಗಾಲಾಗಿದ್ದಾರೆ.ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ನಿಂದ ಕೆಎಸ್ಆರ್ಟಿಸಿ ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಕಂಡಕ್ಟರ್ ಗಳ ಜೇಬಿಗೆ ಕತ್ತರಿ ಬೀಳಲಿದ್ಯಂತೆ,ಬಿಎಂಟಿಸಿ ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ನಿಗಮದ ಕಂಡಕ್ಟರ್ ಡ್ರೈವರ್ ಗಳಿಗೆ ಸಾವಿರ ರುಪಾಯಿ ಕಲೆಕ್ಷನ್ ಮಾಡಿದ್ರೆ ಡ್ರೈವರ್ ಮತ್ತು ಕಂಡಕ್ಟರ್ ಸೇರಿ ಇಪ್ಪತ್ತು, ಮೂವತ್ತು ರುಪಾಯಿ,ಹತ್ತು‌ ಸಾವಿರಕ್ಕೆ ಇನ್ನೂರು ಮುನ್ನೂರು ರುಪಾಯಿ ,ಸಾಮಾನ್ಯ ಕೆಎಸ್ಆರ್ಟಿಸಿ ಬಸ್ ನಲ್ಲಿ 15 ರಿಂದ 20 ಸಾವಿರ ರುಪಾಯಿ ಕಲೆಕ್ಷನ್ ಆಗುತ್ತದೆ .ಇದರಿಂದ ಒಬ್ಬ ಡ್ರೈವರ್ ಕಂಡಕ್ಟರ್ ಗೆ ಪ್ರತಿದಿನ 900 ರಿಂದ 1000 ರುಪಾಯಿ ಕಮೀಷನ್ ಸಿಗುತ್ತಿತ್ತು .ಈಗ ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಕಂಡಕ್ಟರ್ ಡ್ರೈವರ್ ಗಳ ಸಿಗುತ್ತಿದ್ದ ಇನ್ಸೆಟಿವ್ ಗೆ ಕತ್ತರಿ ಬೀಳಲಿದೆ.
 
ಕೆಎಸ್ಆರ್ಟಿಸಿ- NWKRTC ಹಾಗೂ KKRTC - ಡ್ರೈವರ್ ಮತ್ತು ಕಂಡಕ್ಟರ್ ಗೆ ಸಾವಿರಕ್ಕೆ - 20 ರುಪಾಯಿ ಹತ್ತು ಸಾವಿರಕ್ಕೆ - 200 ರುಪಾಯಿ ( ಡ್ರೈವರ್ ಮತ್ತು ಕಂಡಕ್ಟರ್) ನೂರು ರುಪಾಯಿ ಕಲೆಕ್ಷನ್ ಗೆ ಒಂದು  1% ಪ್ರತಿದಿನ ಇದನ್ನು ಕೊಡ್ತಾರೆ .ಮಿನಿಮಮ್- 12 ರಿಂದ 15 ಸಾವಿರ ರುಪಾಯಿ ಕಲೆಕ್ಷನ್ ಆಗುತ್ತದೆ ( ಬೆಂಗಳೂರು ಟೂ ಕನಕಪುರ) ,ಹೊರ ರಾಜ್ಯಗಳಿಗೆ ಹೋಗುವ ನಾರ್ಮಲ್ ಬಸ್ - 25 ರಿಂದ 30 ಸಾವಿರ ( ರಜೆ ಮತ್ತು ಹಬ್ಬದ ಸಂದರ್ಭದಲ್ಲಿ ),ಎಸಿ ಬಸ್ಸುಗಳು ಐರಾವತ, ಎಸಿ ಸ್ಲೀಪರ್, ಅಂಬಾರಿ- ಡ್ರೀಮ್ ಕ್ಲಾಸ್ ಹಾಗೂ ರಾಜಹಂಸ ( 50 ರಿಂದ 70-90 ಸಾವಿರ ರುಪಾಯಿ ವರೆಗೆ ಕಲೆಕ್ಷನ್ ಆಗುತ್ತದೆ .ಹಬ್ಬದ ಸಂದರ್ಭದಲ್ಲಿ ಒಂದು ಲಕ್ಷ ರುಪಾಯಿ ಕಲೆಕ್ಷನ್ ದಾಟುತ್ತದೆ.ಈಗ ಡ್ರೈವರ್ ,ಕಂಡಕ್ಟರ್ ಕಂಗಾಲಾಗಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ