ಎರಡು ಪ್ಯಾಮಿಲಿ ನಡುವಿನ ಮನಸ್ತಾಪಕ್ಕೆ ಎಂಟ್ರಿ ಕೊಟ್ರಾ ತಹಶಿಲ್ದಾರ..!?

ಮಂಗಳವಾರ, 19 ಸೆಪ್ಟಂಬರ್ 2023 (16:00 IST)
ಹೈಕೋರ್ಟ್ ಆರ್ಡರ್ ಗು ಕೇರ್ ಮಾಡಲ್ವಾ ತಹಶಿಲ್ದಾರ್, ಆರ್ ಐ ?ಕೆಆರ್ ಪುರಂನ ವಿಶೇಷ ತಹಶಿಲ್ದಾರ್ ಮಹೇಶ್, ಆರ್ ಐ ಸುಧಾಕರ್, ಮ್ಯಾನೇಜರ್ ಪ್ರಕಾಶ್ ವಿರುದ್ದ ಗಂಭೀರ ಆರೋಪ ಕೇಳಿಬಂದಿದೆ.ರೂಪ ಹಾಗೂ ಶ್ರೀನಿವಾಸ ಎಂಬುವವರಿಂದ ಆರೋಪ ಮಾಡಿದ್ದಾರೆ.
 
ಮಂಡೂರ್ ಗ್ರಾಮ ಪಂಚಾಯಿತಿ ಲಘುಮೇನಹಳ್ಳಿಯ ಜಮೀನಿನ ವಿಚಾರದಲ್ಲಿ ಎರಡು ಫ್ಯಾಮಿಲಿ ನಡುವೆ ಮನಸ್ತಾಪ ಉಂಟಾಗಿದೆ.ನರಸಪ್ಪ ಹಾಗೂ ಸುಬ್ಬಣ್ಣ ಅನ್ನೋ ಸೋಹದರರಿಗೆ ಜಮೀನು ಹಂಚಿಕೆ ಮಾಡಲಾಗಿತ್ತು.ಜಮೀನನ್ನ ಯಾರೆ ಮಾರಬೇಕಾದಲ್ಲಿ ತಮ್ಮ ಫ್ಯಾಮಿಲಿಯವರಿಗೆ ಮಾರಬೇಕು ಅಂತ ವಿಲ್ ಮಾಡಿದ್ರು.ಆದ್ರೆ ಸುಬ್ಬಣ್ಣನ ಹಾಗೂ ಅವರ ಕುಟುಂಬದವರು ಅವರಗೆ ಇದ್ದ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ರಾ..?ಇದನ್ನ ಪ್ರಶ್ನಿಸಿ ಸಿವಿಲ್ ಕೋರ್ಟಿನ ಮೊರೆ ಹೋಗಿದ್ದ ನರಸಪ್ಪ ಮತ್ತು ಕುಟುಂಬ ನ್ಯಾಯಾಲಯದ ಸೂಚನೆಯಂತೆ ಎರಡುವರೆ ಎಕರೆ ಜಮೀನನ್ನು  ನರಸಪ್ಪ ಖರಿದೀಸಿದ್ದ.ಅಂದಿನಿಂದ ಇಂದಿನವರೆಗೂ ನರಸಪ್ಪ ಅವರ ಹೆಸರಲೇ ಪಾಣಿ ಮತ್ತು ಖಾತೆ ಇದೆ.ಕೆಲ ದಿನಗಳ ಹಿಂದೆ ಸುಬ್ಬಣ್ಣ ಮತ್ತು ನರಸಪ್ಪ ಇಬ್ಬರು ತೀರಿಕೊಂಡಿದ್ರು.ತದನಂತರ ಸುಬ್ಬಣ್ಣ ಮಕ್ಕಳು ಆಂಜಿನಪ್ಪ ಹಾಗೂ ಮುನೇಗೌಡ ಅಕ್ರಮವಾಗಿ ತಮ್ಮ ಹೆಸರಿಗೆ ಭೂಮಿ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಇದೆ.ತಹಶೀಲ್ದಾರ್ ಗಮನಕ್ಕೆ ಇಲ್ಲದೇ ಇಷ್ಟೇಲ್ಲ ನಡೆಯುತ್ತಾ..,?ಎರಡು ಬಾರಿ ತಕರಾರು ಅರ್ಜಿ ಕೊಟ್ಟಿದ್ದರು ಖಾತೆ ಹೇಗೆ ಮಾಡಿಸಿದ್ದಾರೆ ಅಂತ ರೂಪ ಪ್ರಶ್ನಿಸಿದ್ದಾರೆ.ತಕರಾರು ಅರ್ಜಿ ಮಿಸ್ ಆಗಿದೆ ಅಂತ ಉಢಾಫೆ ಉತ್ತರ  ಅಧಿಕಾರಿಗಳು ಕೊಡ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ