ಯುವಕನ ಅಂಗಾಗ ದಾನ ಮಾಡಿದ ಕುಟುಂಬ

ಗುರುವಾರ, 24 ಆಗಸ್ಟ್ 2023 (20:24 IST)
ಯುವಕನ ಸಾವಿನ ದುಃಖದಲ್ಲೂ ಕುಟುಂಬ ಸಾರ್ಥಕತೆ‌ ಮೆರೆದಿರುವ ಘಟನೆ ಹಾಸನದ ವಿದ್ಯಾನಗರದಲ್ಲಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡು ಸಾವನ್ನಪ್ಪಿದ್ದ ಯುವಕನ ಅಂಗಾಂಗವನ್ನು ದಾನ ಮಾಡಿದ್ದಾರೆ. ಅಪಘಾತದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ ಹರ್ಷಿಲ್‌ ಸಾವನ್ನಪ್ಪಿದ್ದ. ಜಯದೇವ ಆಸ್ಪತ್ರೆಗೆ ಹೃದಯ, ಏಸ್ಟರ್ ಆಸ್ಪತ್ರೆಗೆ ಲಿವರ್, ಬಿಜಿಎಸ್​​ಗೆ ಕಿಡ್ನಿ, ಚೆನ್ನೈನ ಆಸ್ಪತ್ರೆಗೆ ಶ್ವಾಸಕೋಶ ದಾನ ಮಾಡಿದ್ದಾರೆ. ಈ ಮೂಲಕ ಎಂಟು ಜನರ ಬಾಳಿಗೆ ಬೆಳಕಾಗಿದ್ದಾರೆ. ಅಪಘಾತ ಸಂದರ್ಭದಲ್ಲಿ ಹರ್ಷಿಲ್ ತಲೆಗೆ ಪೆಟ್ಟಾಗಿತ್ತು. ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಫಲಕಾರಿಯಾಗದೆ ಹರ್ಷಿಲ್‌ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹಾಸನ ಬಡಾವಣೆ ಪೊಲೀಸ್ ಠಾಣಾ ವ್ತಾಪ್ತಿಯಲ್ಲಿ‌ ಈ ಘಟನೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ