ಸಿಲಿಕಾನ್ ಸಿಟಿಯಲ್ಲೊಂದು ಹೃದಯ ವಿದ್ರಾವಕ ಘಟನೆ

ಶುಕ್ರವಾರ, 4 ಆಗಸ್ಟ್ 2023 (16:06 IST)
ಮನುಷ್ಯನಿಗೆ ಸಾವು ಅದ್ಹೇಗೆ..ಅದ್ಯಾವ ಸನ್ನಿವೇಶದಲ್ಲಿ ಬರುತ್ತೆ ಅನ್ನೋದನ್ನ ಊಹೆ ಕೂಡ ಮಾಡಿಕೊಳ್ಳಕ್ಕೆ ಸಾಧ್ಯ ಇಲ್ಲ ಅನ್ನೋದಕ್ಕೆ ಮತ್ತೊಂದು ನಿದರ್ಶನ ಇದು.ಯಾಕಂದ್ರೆ ಊಟ ಮಾಡಲು ಅಂತಾ ಬಂದವರು ಸಾವಿನ ಮನೆ ಸೇರಿದ್ದಾರೆ..ಆಗಿದ್ದೇನಂದ್ರೆ ರಾತ್ರಿ‌ 10.30 ರ ಸಮಯ.ಶಿವಾಜಿನಗರ ಸಮೀದ ಸೆಂಟ್ರಲ್ ಸ್ಟ್ರೀಟ್ ರಸ್ತೆ.ರಸ್ತೆ ಬದಿಯಲ್ಲಿ ದಾಸ್ ಎಂಬಾತ ಎಗ್ ರೈಸ್ ನ ಗಾಡಿ ಇಟ್ಕೊಂಡಿದ್ದ.ಬಡವರು ಮತ್ತು ಮಧ್ಯಮ ವರ್ಗದ ಜನ ಇದೇ ಅಂಗಡಿಗೆ ಬಂದು ಊಟ ಮಾಡಿ ತೆರಳ್ತಿದ್ರು ಆದ್ರೆ ನಿನ್ನೆ ರಾತ್ರಿಯ ಸನ್ನಿವೇಶ ಮಾತ್ರ ಎಂದಿನಂತೆ ಇರಲಿಲ್ಲ.ಎಗ್ ರೈಸ್ ತಿನ್ನಲು ಬಂದವರನ್ನ ಕಟ್ಟಡದ ಗೋಡೆ ಹಾಗೂ ವಾಟರ್ ಟ್ಯಾಂಕ್ ಬಲಿ ಪಡೆದಿದೆ

ಎಗ್ ರೈಸ್ ಹಾಕ್ತಿದ್ದ ಅಂಗಡಿ ಪಕ್ಕದಲ್ಲೇ ಐದಂತಸ್ತಿನ ಕಟ್ಟಡವೊಂದಿದೆ‌.ಕಟ್ಟಡದ ಮೇಲಿನ ಸಣ್ಣ ಗೋಡೆ ಮೇಲೆ ಅವೈಜ್ಙಾನಿಕವಾಗಿ ಐನೂರು ಲೀಟರ್ ಸಾಮರ್ಥ್ಯದ ಎರಡು ವಾಟರ್ ಟ್ಯಾಂಕ್ ಅನ್ನ ಇರಿಸಲಾಗಿತ್ತು.ಹೆಚ್ಚಿನ ತೂಕ ಇದ್ದಿದ್ದರಿಂದ ಗೋಡೆ ಬಿರುಕುಗೊಂಡು ಕುಸಿದಿದೆ..ಈ ವೇಳೆ ವಾಟರ್ ಟ್ಯಾಂಕ್ ಕೂಡ ನೆಲ ಕಚ್ಚಿದೆ.ಗೋಡೆಗೆ ಅಳವಡಿಸಿದ್ದ ಹಾಲೋಬ್ಲಾಕ್ ಊಟ ಮಾಡ್ತಿದ್ದ ಅರುಳ್,ನಾಗೇಶ್ವರ್ ರಾವ್,ಕಮಲ್ ಥಾಪ ಎಂಬುವರ ಮೇಲೆ ಬಿದ್ದಿದ್ದೆ ಘಟನೆಯಲ್ಲಿ ತರಕಾರಿ ವ್ಯಾಪಾರಿ ಅರುಳ್ ಮತ್ತು ನಾಗೇಶ್ವರ್ ಸ್ಥಳದಲ್ಲೇ ಸಾವನ್ನಪ್ಪಿದ್ರೆ..ಕಮಲ್ ಥಾಪ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಸದ್ಯ ಘಟನೆ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕಟ್ಟಡ ಮಾಲೀಕರ ವಿರುದ್ಧ 304 ಎ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು ತನಿಖೆ ಮುಂದುವರೆದಿದೆ..ಅದೇನೇ ಹೇಳಿ ಊಟ ಮಾಡಲು ಅಂತಾ ಬಂದವರು ಸಾವಿನ ಮನೆ ಸೇರಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ