ಹೌದು...೩೭೦ನೇ ವಿಧಿ ರದ್ದಾದ ಬಳಿಕ ಕಾಶ್ಮೀರ ಶಾಂತವಾಗಿದೆ... ಕಲ್ಲೇಟುಗಳ ಆರ್ಭಟ ಇಲ್ಲ, ಬಂದೂಕಿನ ಶಬ್ದವಂತೂ ಎಲ್ಲೋ ಹಾಗೋ ಹೀಗೋ ಮಾತ್ರ ಕೇಳಿ ಬರ್ತಿದೆ... ಪ್ರವಾಸೋದ್ಯಮದ ಚಟುವಟಿಕೆಗಳು ಗರಿಗೆದರಿಕೊಂಡಿವೆ.... ಪ್ರವಾಸಿಗರು ಕಾಶ್ಮೀರಕ್ಕೆ ಬಂದೂ ಹೋಗೋದನ್ನ ಬಿಡ್ತಿಲ್ಲ...
ಕಾಶ್ಮೀರ ಅಂದರೇ ಅದು ಉಗ್ರರ ತಾಣ, ಬರೀ ಬಂದೂಕಿನ ಸದ್ದೇ ಹೆಚ್ಚಾಗಿ ಕೇಳಿ ಬರುತ್ತಿದ್ದ ನೆಲ.... ಸದಾ ಹಿಂಸೆ, ಉಗ್ರವಾದ, ಪ್ರತ್ಯೇಕತಾವಾದಿಗಳ ಉಪಟಳ, ಪ್ರತಿಭಟನೆ, ಹೀಗೆ ಪ್ರತಿ ನಿತ್ಯ ಇದನ್ನ ಬಿಟ್ಟರೆ ಬೇರೆ ಎಂತದ್ದು ಚಟುವಟಿಕೆಗಳು ಕಣಿವೆ ರಾಜ್ಯದಲ್ಲಿ ನಡೆಯುತ್ತಿರಲಿಲ್ಲ..
ಆದರೆ ಅದ್ಯಾವಾಗ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ೩೭೦ನೇ ವಿಧಿಯನ್ನ ರದ್ದು ಮಾಡ್ತೋ, ಅಲ್ಲಿಂದ ಇಲ್ಲಿಯವರೆಗೆ ಈ ಸಂಘರ್ಷದ ನೆಲದಲ್ಲಿ ಆಗ್ತಾ ಇದ್ದ, ಅನೈತಿಕ ಚಟುವಟಿಕೆಗಳಿಗೆ ಬಹುತೇಕ ಬ್ರೇಕ್ ಬಿದ್ದೋಗಿದೆ ಎನ್ನಬಹುದು...!
ಯೆಸ್... ವೀಕ್ಷಕರೇ ೩೭೦ನೇ ವಿಧಿ ರದ್ದಾದ ಬಳಿಕ ಜಮ್ಮು ಕಾಶ್ಮೀರದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಿದೆ. ಉಗ್ರವಾದ, ಪ್ರತ್ಯೇಕತಾವಾದ, ಪ್ರತಿಭಟನೆಗಳು ತಹಬದಿಗೆ ಬಂದಿವೆ