ಸಿದ್ದು ಜೊತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು

ಭಾನುವಾರ, 4 ಸೆಪ್ಟಂಬರ್ 2022 (20:22 IST)
ಹಾಸನದಲ್ಲಿ ಸಿದ್ದು ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.ತಮ್ಮ ನೆಚ್ಚಿನ ನಾಯಕನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮಹಿಳೆಯರಂತೂ ಪರದಾಡಿದಾರೆ.
 
ನೂಕು ನುಗ್ಗಲಿನ ನಡುವೆ ಪ್ರಾಯಾಸಪಟ್ಟು  ಕೊನೆಗೂ  ಜನ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.ಇನ್ನು ಈ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೋಕಿನ ಗೊಲ್ಲರಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.ತಮ್ಮ ಆಪ್ತ ಪಟೇಲ್ ಶಿವಪ್ಪ ಮಗನ ಬೀಗರೂಟಕ್ಕೆ  ಮಾಜಿ ಸಿಎಂ ಸಿದ್ದರಾಮಯ್ಯ ಬಂದಿದ್ರು.ಊಟ ಮುಗಿಸಿ ಹೊರ ಹೋಗುವಾಗ ಜನರು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.ಕೈಯಲ್ಲಿ ಮೊಬೈಲ್‌ಹಿಡಿದು ಸಿದ್ದರಾಮಯ್ಯ ರತ್ತ  ನೂರಾರು ಜನರು ನುಗ್ಗಿ ಬಂದಿದ್ದಾರೆ.ಜನರನ್ನು ನಿಯಂತ್ರಿಸಲು ಪೊಲೀಸರಂತೂ ಹರಸಾಹಸಪಟ್ಟಿದ್ದಾರೆ.ಜನಸಂದಣಿ ನಡುವೆ ಎಲ್ಲರ ಜೊತೆಗೂ ಸಿದ್ದರಾಮಯ್ಯ ಸೆಲ್ಫಿಗೆ ಫೋಸ್ ಕೊಟ್ಡು ಹೊರಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ