ರೈತರು ಪ್ರತಿಭಟನೆ ಮಾಡಿ ಸರ್ಕಾರದ ಗಮನಕ್ಕೆ ತರ್ತಿದ್ದಾರೆ: ಚಲುವರಾಯಸ್ವಾಮಿ

ಬುಧವಾರ, 23 ಆಗಸ್ಟ್ 2023 (09:26 IST)
ಬೆಂಗಳೂರು : ನೀರಿಗಾಗಿ ರೈತರು ಪ್ರತಿಭಟನೆ ಮಾಡಿ ಸಮಸ್ಯೆ ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ, ಒಳ್ಳೆಯದು ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಬಿಡುಗಡೆ ವಿಚಾರವಾಗಿ ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದರು. ನೀರಿಗಾಗಿ ರೈತರು ಪ್ರತಿಭಟನೆ ಮಾಡಿ ಸಮಸ್ಯೆ ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ. ಒಳ್ಳೆಯದು ಆದರೆ ಬಿಜೆಪಿ ಪ್ರತಿಭಟನೆ ಬಗ್ಗೆ ಏನು ಹೇಹಬೇಕು ಅಂತ ಗೊತ್ತಾಗ್ತಿಲ್ಲ ಎಂದರು.

ತಮಿಳುನಾಡು ಕಳೆದ ಎರಡು ತಿಂಗಳು ನೀರು ಬೇಕು ಅಂತ ಕೇಳ್ತಿದ್ದಾರೆ. ಅಂತಿಮವಾಗಿ 15 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಅಂತ ಹೇಳಿದ್ರು. ಆಗದೇ ಇದ್ದಾಗ 10 ಸಾವಿರ ಕ್ಯೂಸೆಕ್ ನೀರು ಬೀಡಲಾಗಿದೆ. ಬಿಜೆಪಿ ಸಂಸದರು ಹೈಕಮಾಂಡ್ ನಾಯಕರಿಗೆ ತಿಳುವಳಿಕೆ ಇಲ್ಲ ಅನ್ಸುತ್ತೆ.ನಾವು ತಮಿಳುನಾಡಿನ ರಾಜಕೀಯವಾಗಿ ಹೊಂದಾಣಿಕೆ ಇರಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ