ಮಾರಣಾಂತಿಕ ಕೊರೊನಾ ವೈರಸ್ ರಾಜ್ಯದಲ್ಲಿ ಸಾವು, ನೋವಿಗೆ ಕಾರಣವಾಗುತ್ತಿರುವಾಗಲೇ ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿದೆ.
ಕೊರೊನಾ ಚೆಕ್ ಪೋಸ್ಟ್ ಗಳನ್ನು ಗಡಿಗಳಲ್ಲಿ ಆರಂಭಿಸಲಾಗಿದೆ. ಕೋಲಾರ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೀಗಂತ ಡಿಸಿ ಸತ್ಯಭಾಮ ಹೇಳಿದ್ದಾರೆ.
ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೊರೊನಾ ಚೆಕ್ ಪೋಸ್ಟ್ ಗಳನ್ನು ಆರಂಭಿಸಲಾಗಿದೆ. ಈವರೆಗೂ ಕೊರೊನಾ ಸೋಂಕು ಪೀಡಿತರು ಪತ್ತೆಯಾಗಿಲ್ಲ ಅಂತ ಹೇಳಿದ್ದಾರೆ.