ಪ್ರಸುತ್ತ ಮಾರುಕಟ್ಟೆಯಲ್ಲಿ ಸೇಬು 100 ರಿಂದ 200 ರೂ, ಕಿತ್ತಳೆ 60 - 100ರೂ , ದಾಳಿಂಬೆ 100 ರಿಂದ 150 ರೂ , ಸಪೋಟ 60- 80ರೂ, ಕಲ್ಲಂಗಡಿ 15 ರಿಂದ 20ರೂ, ದ್ರಾಕ್ಷಿ 60 ರಿಂದ 100ರೂ ಇದೆ. ಕಳೆದ ಹಲವು ತಿಂಗಳಿಂದ ಕ್ಯಾರೆಟ್ ದರ ಕೆಜಿಗೆ 90-100 ರೂ. ಇದ್ದದ್ದು ಇದೀಗ ಕೆಜಿಗೆ 20-30 ರೂ.ಗೆ ಇಳಿಕೆಯಾಗಿದೆ. ಮೂಲಂಗಿ 30 ರೂ. ಬಜ್ಜಿ ಮೆಣಸು 40 ರೂ. ಸೌತೆಕಾಯಿ 30 ರೂ, ಬೀಟ್ ರೂಟ್ 25 ರೂ, ಹೀರೇಕಾಯಿ 60 ರೂ, ಟೊಮೆಟೊ 30 ರೂ, ಮೆಂತ್ಯ ಸೊಪ್ಪು 20 ರೂ, ದಂಟಿನ ಸೊಪ್ಪು 30 ರೂ, ಸಬ್ಬಕ್ಕಿ ಸೊಪ್ಪು 40ರೂ, ಬಾಳೆ ಎಲೆ ಒಂದಕ್ಕೆ 5 ರೂ, ಸಿಹಿ ಕುಂಬಳ 12 ರೂ, ಈರುಳ್ಳಿ 24 ರೂ, ಎಲೆ ಕೋಸು 16 ರೂ ಇದ್ದು ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಅಗತ್ಯ ವಸ್ತು ಬೆಲೆಗಳ ಜೊತೆಗೆ ಹಣ್ಣುಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಜೇಬಿನ ತುಂಬಾ ಹಣ ತಗೊಂಡೂ ಹೋದ್ರೂ, ಜನರು ಹಣ್ಣುಗಳು ಮತ್ತು ತರಕಾರಿಗಳನ್ನ ಕೊಂಡುಕೊಳ್ಳುವುದೇ ಕಷ್ಟವಾಗಿದೆ .ಬಿಸಿಲಿನ ತಾಪಕ್ಕೆ ಮುಂದಿನ ದಿನಗಳಲ್ಲಿ ಹಣ್ಣು ಮತ್ತು ತರಕಾರಿಗಳ ದರ ಮತ್ತಷ್ಟು ಏರಿಕೆಯಾಗುವ ಸಾದ್ಯತೆ ಕೂಡ ಇದೆ.