ಎಸ್ ಟಿ ಸೋಮಶೇಖರ್ ಲೋಕಯುಕ್ತ ತನಿಖೆ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ

ಸೋಮವಾರ, 19 ಸೆಪ್ಟಂಬರ್ 2022 (20:45 IST)
ಎಸ್.ಟಿ. ಸೋಮಶೇಖರ್ ಲೋಕಾಯುಕ್ತ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಹೈಕೋರ್ಟ್ ನಲ್ಲಿ ಲೋಕಯುಕ್ತ ತನಿಖೆಗೆ ಸೂಚನೆ ಕೊಟ್ಟಿದೆ. ಅವರ ವಿರುದ್ಧ FIR ಆಗಿದೆ, FIR ಮೇಲೆ ತನಿಖೆ ಪ್ರಾರಂಭ ಮಾಡುವುದಾದರೇ.ಅವರು ಮಂತ್ರಿಯಾಗಿರೋದು ಸೂಕ್ತವಲ್ಲ. ಸತ್ಯಾ ಸತ್ಯತೆಗಳನ್ನ ಮರೆಮಾಚುವ ಅವಕಾಶಗಳು ಇರುತ್ತವೆ. ಆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವುದು ಸೂಕ್ತ ಎಂದಿದ್ದಾರೆ. 
ಸರ್ಕಾರದ 40% ಕಮಿಷನ್ ದಾಖಲೆ ಬಿಡುಗಡೆ ವಿಚಾರವಾಗಿ ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹಾರಿಸೋನು,  ಹಿಟ್ ಆಂಡ್ ರನ್ ಮಾಡ್ತಾರೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದಾಖಲೆಗಳನ್ನ ಇಟ್ಟು ಚರ್ಚೆ ಮಾಡ್ತೀನಿ, ನಾಲ್ಕು ದಿನ ನಿಮ್ಮ ಮುಂದೆ ಒಂದು ಚಟುವಟಿಕೆ ತೋರಿಸಿ ಸುಮ್ಮನೆ ಆಗೋದು ಸರಿಯಲ್ಲ. ಬಿಬಿಎಂಪಿಯಿಂದ ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವ ಬದಲಾಗಿ. ನಾಲ್ಕೈದು ಕಡೆ ತೆರವು ಮಾಡಿ ಸುಮ್ಮನಾಗುವುದಲ್ಲ, ಕಳೆದ 25 ವರ್ಷಗಳಿಂದ ಆದ ಅನಾಹುತಗಳು, ಈಗಾದ ಅನಾಹುತ ಸರಿಪಡಿಸಲು ಕಳೆದ ಐದು ವರ್ಷಗಳಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತರಬೇಕು. ಜೆಡಿಎಸ್ ಕಾಲದಲ್ಲಿ ಆಗಿರುವ ನಿರ್ಧಾರ ಅಂತ ಆರೋಪ ಮಾಡಿದ್ದಾರೆ ಟೆಕ್ನಿಕಲಿ ಬೆಂಗಳೂರು ನಾಗರೀಕ ಆಗಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಬೆಂಗಳೂರು ಮೂಲಭೂತ ಸೌಕರ್ಯಗಳ ಬಗ್ಗೆ ನಾನು ನಿರ್ಧಾರ ಮಾಡಿದ್ರೆ ರಾಜಕೀಯ ನಿವೃತ್ತಿ ಘೋಷಣೆ ಮಾಡ್ತೀನಿ ಎಂದು ಟಾಂಗ್ ಕೊಟ್ರು.ಇನ್ನು ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ ತನಿಖೆ ವಿಚಾರವಾಗಿ ನಾನೊಬ್ಬ ರಾಜಕಾರಣಿ, ರೈತ, ಬ್ಯುಸಿAV್‌ಮೆನ್ ಅಂದಿದ್ದಾರೆ.
ನಾನು ಭ್ರಷ್ಟಾಚಾರ ಮಾಡಿಲ್ಲ ಅಂದಿದ್ದಾರೆ. ಅವ್ರು ಭ್ರಷ್ಟಾಚಾರ ಮಾಡದೆ ಇದ್ದಲ್ಲಿ ಈಡಿ ನೋಟಿಸ್ ಕೊಟ್ಟಿದ್ದರೂ. ಅದಕ್ಕೆ ಬಹುಶಃ ಅವರು ಉತ್ತರ ಕೊಡೋ ಸಾಮರ್ಥ್ಯ ಹೊಂದಿದ್ದಾರೆ, ಅದರಿಂದ ಹೊರಗೆ ಬರೋ ವಿಶ್ವಾಸ ಅವರಿಗೆ ಇದ್ದಾಗ ಅದರ ಬಗ್ಗೆ ಟೀಕೆ ಮಾಡೋಕೆ ಹೋಗಲ್ಲ ಅಂತ ಖಿಚಾಯಿಸಿದ್ರು. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ