ಇಲ್ಲ ಇಲ್ಲ ಎನ್ನುತ್ತಲೇ ಗೌಡರ ಕುಟುಂಬದ ನಾಲ್ವರಿಗೆ ಜೆಡಿಎಸ್ ಟಿಕೆಟ್?
ಕುಮಾರಸ್ವಾಮಿ ಈ ಹಿಂದೆ ತಮ್ಮ ಪತ್ನಿ ಅನಿತಾ ಸ್ಪರ್ಧಿಸಲು ಕಾರ್ಯಕರ್ತರೇ ಒತ್ತಾಯ ಮಾಡುತ್ತಿದ್ದಾರೆ ಎಂದಿದ್ದರು. ಇನ್ನೊಂದೆಡೆ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಕುಟುಂಬದೊಳಗೇ ತೀವ್ರ ಒತ್ತಡ ಬಂದಿತ್ತು. ಈ ಎಲ್ಲಾ ಹಿನ್ನಲೆಯಲ್ಲಿ ದೇವೇಗೌಡರು ನಾಲ್ವರ ಸ್ಪರ್ಧೆಗೆ ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ.