ರಾಜ್ಯ ರಾಜಕೀಯದಲ್ಲಿ ಚುನಾವಣೆಯ ರಂಗು ತಾರತಕ್ಕೆರಿದ್ದು, ಎಲ್ಲ ರಾಜಕೀಯ ಪಕ್ಷಗಳು ಗೆಲುವಿಗಾಗಿ ರಣತಂತ್ರ ರೂಪಿಸುತ್ತಿವೆ. ರಾಜಕೀಯ ಪಕ್ಷಗಳ ನಾಯಕರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದು. ಈ ಬಾರಿಯ ಚುನಾವಣೆಯಲ್ಲಿ ಹಣದ ಹೊಳೆ ನೀರಿನಂತೆ ಹರಿಯುವ ನಿರೀಕ್ಷೆ ಇದೆ.
ಚುನಾವಣೆಯಲ್ಲಿ ಜಯಭೇರಿಯಾಗಲು ರಾಜಕೀಯ ಪಕ್ಷಗಳು ಹಣದ ಹೊಳೆ ಹರಿಸುವುದು ಹೊಸದೆನಲ್ಲ. ಚುನಾವಣೆಗಳು ಸಮೀಪಿಸುತ್ತಿದಂತೆ ರಾಜಕಾರಣಿಗಳು ಕುದುರೆ ವ್ಯಾಪಾರದಲ್ಲಿ ತೊಡಗುವುದು ಸಹಜವೇ ಸರಿ. ಇದೀಗ, ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಾಲ್ವರು ಶಾಸಕರು ಕೋಟಿ ಕೋಟಿ ಬೆಲೆಗೆ ತಮ್ಮ ಮತವನ್ನು ಮಾರಾಟಕಿಟ್ಟಿದ್ದಾರೆ.
ಬಸವ ಕಲ್ಯಾಣ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ್ ಖೂಬಾ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜೆ.ಟಿ.ದೇವೇಗೌಡ, ಆಳಂದ ಕ್ಷೇತ್ರದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಮತ್ತು ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತುರ್ ಪ್ರಕಾಶ್ ರಾಜ್ಯಸಭೆಗೆ ಬೆಂಬಲ ಸೂಚಿಸಲು 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವ ಶಾಸಕರಾಗಿದ್ದಾರೆ.
ರಾಜ್ಯ ಜೆಡಿಎಸ್ ಪಕ್ಷದಲ್ಲಿ ಆಂತರಿಕ ಕಲಹ ಉಂಟಾಗಿದ್ದು, ಜೆಡಿಎಸ್ ಶಾಸಕರ ಮೇಲೆ ಕುಮಾರಸ್ವಾಮಿ ಅವರ ಹಿಡಿತ ತಪ್ಪಿದಂತೆ ಕಾಣುತ್ತಿದೆ. ಖಾಸಗಿ ಚಾನೆಲ್ ನಡೆಸಿರುವ ಸ್ಟ್ರಿಂಗ್ ಆಪರೇಶನ್‌ನಲ್ಲಿ ಇಬ್ಬರು ಜೆಡಿಎಸ್ ಪಕ್ಷದ ಶಾಸಕರ ಬಂಡವಾಳ ಬಹಿರಂಗವಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ 10 ಶಾಸಕರು ಬೇರೆ ಪಕ್ಷಗಳ ಅಭ್ಯರ್ಥಿಯನ್ನು ಬೆಂಬಲಿಸುವ ನಿರೀಕ್ಷೆಯಾಗಿದೆ.