ಧರ್ಮಸ್ಥಳ ಹಲವಾರು ಶವಗಳನ್ನು ಹೂತಿಟ್ಟ ಪ್ರಕರಣ: ಕಾಡಿನಲ್ಲಿ 7ನೇ ದಿನ ಹೇಗೇ ನಡೆಯುತ್ತಿದೆ ಕಾರ್ಯಚರಣೆ

Sampriya

ಮಂಗಳವಾರ, 5 ಆಗಸ್ಟ್ 2025 (15:49 IST)
ಮಂಗಳೂರು: ಧರ್ಮಸ್ಥಳ ಸುತ್ತಾ ಮುತ್ತಾ ಹಲವು ಮೃತದೇಹಗಳನ್ನು ಹೂತುಹಾಕಲಾಗಿದೆ ಎನ್ನಲಾದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡವು (ಎಸ್ಐಟಿ) ಮಂಗಳವಾರ ಶೋಧ ಕಾರ್ಯ ಆರಂಭಿಸಿದೆ.

ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಸಮೀಪದಲ್ಲಿರುವ ಹೆದ್ದಾರಿ ಪಕ್ಕದ ಕಾಡಿಗೆ ಎಸ್ಐಟಿ ತಂಡವು ಸಾಕ್ಷಿ ದೂರುದಾರನನ್ನು ಕರೆದೊಯ್ದು ಉತ್ಖನನ ಶುರು ಮಾಡಿದೆ.

ಎಸ್ಐಟಿ ಜೊತೆಗೆ ಸುಮಾರು 20 ಕಾರ್ಮಿಕರು ಶೋಧ ಕಾರ್ಯಕ್ಕೆ ಕಾಡಿನೊಳಗೆ ತೆರಳಿದ್ದಾರೆ. ಅಗೆಯುವ ಯಂತ್ರವನ್ನೂ ಸ್ಥಳಕ್ಕೆ ತರಲಾಗಿದೆ.

ಧರ್ಮಸ್ಥಳದ ಸುತ್ತಾ ಮುತ್ತಾ ಹಲವಾರು ಶವಗಳನ್ನು ಹೂತು ಹಾಕಿದ್ದೇನೆ ಎಮದು  ಸಾಕ್ಷಿ ದೂರುದಾರ 13 ಜಾಗಗಳನ್ನು ತೋರಿಸಿದ್ದ. ಅವುಗಳಲ್ಲಿ 10 ಜಾಗಗಳಲ್ಲಿ ಸೋಮವಾರದವರೆಗೆ ಶೋಧ ಕಾರ್ಯ ನಡೆದಿದೆ. ಸೋಮವಾರ ಆತ ತೋರಿಸಿದ್ದ 11ನೇ ಜಾಗದದಿಂದ ಸುಮಾರು 100 ಮೀ ದೂರದಲ್ಲಿ ನೆಲದ ಮೇಲೆಯೆ ಮೃತದೇಹದ ಅವಶೇಷ ಸಿಕ್ಕಿತ್ತು. ದೂರುದಾರ ತೋರಿಸಿದ್ದ 11ನೇ ಜಾಗವನ್ನು ಮಂಗಳವಾರ ಅಗೆಯಲಾಗುತ್ತಿದೆ. ಈ ಜಾಗವು ಹೆದ್ದಾರಿಯಿಂದ ಸುಮಾರು 20 ಮೀ ದೂರದಲ್ಲಿ ಕಾಡಿನೊಳಗೆ ಇದೆ.

ಗುರುವಾರ ನೇತ್ರಾವದಿ ನದಿ ಪಕ್ಕದ ಕಾಡಿನಲ್ಲಿ ನಡೆದ ಕಳೇಬರಹ ಉತ್ಖನನದಲ್ಲಿ 6ನೇ ಪಾಯಿಂಟ್‌ನಲ್ಲಿ ಪುರುಷನ ಮೃತದೇಹದ ಮೂಳೆಗಳು ಪತ್ತೆಯಾಗಿತ್ತು. ಉಳಿದ ಒಂಬತ್ತು ಜಾಗಗಳಲ್ಲಿ ಅಗೆದಾಗ ಮೃತದೇಹದ ಯಾವುದೇ ಕುರುಹುಗಳು ಸಿಕ್ಕಿಲ್ಲ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ