ಶಕ್ತಿ ಯೋಜನೆಯಡಿ ಅಂತಾರಾಜ್ಯ ಬಸ್ನಲ್ಲಿ ಉಚಿತ ಪ್ರಯಾಣ

ಶನಿವಾರ, 12 ಆಗಸ್ಟ್ 2023 (14:52 IST)
ಬೆಳಗಾವಿ : ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆ ಹಲವೆಡೆ ಇನ್ನೂ ಗೊಂದಲಮಯವಾಗಿರುವ ಬಗ್ಗೆ ವರದಿಯಾಗಿದೆ.
 
ಬೆಳಗಾವಿಯಿಂದ ನಿಪ್ಪಾಣಿಗೆ ಅಂತಾರಾಜ್ಯ ಬಸ್ನಲ್ಲಿ ಪ್ರಯಾಣಿಸಿದ ಮಹಿಳೆಗೆ ಈ ಹಿಂದೆ ಟಿಕೆಟ್ ಶುಲ್ಕ ವಿಧಿಸಿರಲಿಲ್ಲ. ಆದರೆ ಈಗ ಟಿಕೆಟ್ಗೆ ಹಣ ಪಡೆಯಲಾಗಿದೆ ಎಂದು ಆರೋಪ ಮಾಡಲಾಗಿದೆ. ಈ ಕುರಿತು ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದಾರೆ. ಇದರೊಂದಿಗೆ, ಅಂತಾರಾಜ್ಯ ಬಸ್ನಲ್ಲಿ ರಾಜ್ಯದೊಳಗಡೆಯ ಸಂಚಾರಕ್ಕೂ ‘ಶಕ್ತಿ ಯೋಜನೆ’ ಅಡಿ ಉಚಿತ ಪ್ರಯಾಣ ಅನ್ವಯವಾಗುವುದಿಲ್ಲವೇ ಎಂಬ ಪ್ರಶ್ನೆಗಳನ್ನು ಹಲವು ಮಂದಿ ಕೇಳಿದ್ದಾರೆ.

ಬೆಳಗಾವಿಯಿಂದ ನಿಪ್ಪಾಣಿಗೆ ಪ್ರಯಾಣಿಸಿದ ಮಹಿಳೆಯ ಬಸ್ ಟಿಕೆಟ್ ಮತ್ತು ಹಿಂದಿರುಗುವ ಟಿಕೆಟ್ನ ಎರಡು ಪ್ರತ್ಯೇಕ ಚಿತ್ರಗಳನ್ನು ‘ಆಲ್ ಅಬೌಟ್ ಬೆಳಗಾಂ, ಬೆಳಗಾವಿ ನ್ಯೂಸ್’ ಎಂಬ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಳ್ಳಲಾಗಿದೆ.

ಒಂದು ಚಿತ್ರದಲ್ಲಿ ಜುಲೈ 21 ರಂದು ನೀಡಲಾದ ಅಂತಾರಾಜ್ಯ ಬಸ್ ಟಿಕೆಟ್ ಶಕ್ತಿ ಯೋಜನೆಯಡಿಯಲ್ಲಿ ‘ಶೂನ್ಯ’ ಟಿಕೆಟ್ ಆಗಿತ್ತು. ಇನ್ನೊಂದು ಚಿತ್ರದಲ್ಲಿ, ಅದೇ ಅಂತಾರಾಜ್ಯ ಬಸ್ ಅದೇ ಮಾರ್ಗದಲ್ಲಿನ ಪ್ರಯಾಣಕ್ಕೆ 74 ರೂ. ಟಿಕೆಟ್ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ