ಶಕ್ತಿ ಯೋಜನೆ ಬಸ್‌ಗಳಿಗೆ 2,000 ಖಾಸಗಿ ಡ್ರೈವರ್‌ಗಳ ನೇಮಕ

ಮಂಗಳವಾರ, 8 ಆಗಸ್ಟ್ 2023 (18:00 IST)
ಕಳೆದ ನಾಲ್ಕೈದು ವರ್ಷಗಳಿಂದ ಸಾರಿಗೆ ಸಿಬ್ಬಂದಿ ಸರಿಯಾದ ವೇತನವಿಲ್ಲದೆ ಇಲಾಖೆಯಲ್ಲಿ ಹಗಲಿರುಳು ಯನ್ನದೆ ದುಡಿಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅಸ್ಟೆ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೊಂಡ ನಂತರ, ಸಾರಿಗೆ ಇಲಾಖೆ ಕೊಂಚ ಚೆತರಿಸಿಕೊಂಡಿದೆ ಎಂದು ಸಾರಿಗೆ ಇಲಾಖೆ  ಹೇಳಿಕೊಂಡಿದೆ. ಇದರಿಂದಾಗಿ ಸಾರಿಗೆ ಸಿಬ್ಬಂದಿ ಕೊಂಚ ಉಸಿರು ಬಿಟ್ಟಿದ್ರು. ಆದ್ರೆ ಶಕ್ತಿ ಯೋಜನೆಗೆ ಬಸ್ ಗಳು ಕಡಿಮೆ ಬಿದಿದ್ದು, ಸಾರಿಗೆ ಇಲಾಖೆ ಹೊಸ ಎಲೆಕ್ಟ್ರಿಕ್ ಬಸ್ ಗಳ ಖರಿದಿ ಹಾಗೂ  ಹಳೆ ಬಸ್ ಗಳನ್ನ ಹೊಸದಾಗಿ ನವಿಕರಣಮಾಡಿ ರಸ್ತೆಗಿಳಿಸೊಕೆ  ಮುಂದಾಗಿದೆ. ಆದರೆ ಈ ಎಲ್ಲ ಬಸ್ ಗಳಿಗೆ ಸಿಬ್ಬಂದಿ ಕೊರತೆ ಇದ್ದು ಸಿಬ್ಬಂದಿಗಳಿಗೆ ಕೆಲಸದ ಒತ್ತಡೆ ಬಿಳುತ್ತಿದೆ ಎಂದು ಇದನ್ನೆ ಮುಂದೆ ಇಟ್ಟುಕೊಂಡ ಸಾರಿಗೆ ಇಲಾಖೆ ಔಟ್ ಸೋರ್ಸ್ ಏಜೆನ್ಸಿ ಯಿಂದ ಖಾಸಗಿ ಚಾಲಕರ ನೇಮಕಕ್ಕೆ ಕೆಎಸ್‌ಆರ್‌ಟಿಸಿ ಮುಂದಾಗಿದೆ.

ಇನ್ನೂ ಸಿಬ್ಬಂದಿ ಕೊರತೆಯನ್ನೆ ಮುಂದೆ ಇಟ್ಟು ಕೊಂಡು ಕೆಲಸದ ಒತ್ತಡವನ್ನು ಕಡಿಮೆ ಮಾಡುವುದಾಗಿ ಹೇಳಿ ಈ ನಿಟ್ಟಿನಲ್ಲಿ ಖಾಸಗಿ ಚಾಲಕರ ಕೈಗೆ ಸಾರಿಗೆ ಇಲಾಖೆಯ ಬಸ್‌ಗಳನ್ನು ಕೊಡುವುದಕ್ಕೆ KSRTC ಮುಂದಾಗಿದೆ. ಇದಕ್ಕೆಲ್ಲ ಕಾರಂಣ ನೊಡೊದಾದ್ರೆ ಕಳೆದ, 2-3 ವರ್ಷಗಳಿಂದ ಚಾಲಕ, ಹಾಗೂ ನಿರ್ವಾಹಕರು ಸೆರಿದಂತೆ ಇತರೆ ಸಿಬ್ಬಂದಿಯ ನೇಮಕ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಚಾಲಕರ ಕೊರತೆ ಎದುರಾಗಿದ್ದು, ಸಮಸ್ಯೆ ಪರಿಹಾರಕ್ಕೆ ತಾತ್ಕಾಲಿಕವಾಗಿ 2000 ಸಾವಿರ ಖಾಸಗಿ ಡ್ರೈವರ್ ಗಳ ನೇಮಕಕ್ಕೆ ಪ್ಲಾನ್ ಮಾಡಲಾಗಿದೆ. ಆದ್ರೆ ಸಾರಿಗೆ ಇಲಾಖೆ ಯನ್ನೆ ನಂಬಿಕೊಂಡು ಲಕ್ಷಾಂತರ ಜನ ಕೆಲಸಮಾಡುತ್ತಿದ್ದೆವೆ ಒಂದು ವೇಳೆ ಖಾಸಗಿ ಚಾಲಕರನ್ನು ನೇಮಕ ಮಾಡಿಕೊಂಡರೆ ನಮ್ಮ ಬದುಕು ಬಿದಿಗೆ ಬರುತ್ತದೆ  ಇದರಿಂದಾಗಿ .ಖಾಸಗಿ ಡ್ರೈವರ್ ಗಳ ನೇಮಕ ಮಾಡಿಕ್ಕೊಳೊದು ಸರಿಯಲ್ಲ ಎಂದು ಸಾರಿಗೆ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ