ಕೊರಟಗೆರೆಯಲ್ಲಿ ಜಿ.ಪರಮೇಶ್ವರ್‌ಗೆ ಮತ್ತೆ ಸೋಲು ಎಂದ ಜಿ.ಪಂ.ಸದಸ್ಯ

ಶುಕ್ರವಾರ, 22 ಡಿಸೆಂಬರ್ 2017 (14:25 IST)
ಕೊರಟಗೆರೆ ಹಾಗೂ ಮಧುಗಿರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಶಾಸಕ-ಸಚಿವರಾಗಿ ಮತದಾರರಿಗೆ ವಂಚಿಸಿ ಗೋಸುಂಬೆ ನಡವಳಿಕೆ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿಯೂ ಸೋಲು ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾ ಪಂಚಾಯತ್ ಸದಸ್ಯ ವೈ.ಎಚ್.ಹುಚ್ಚಯ್ಯ ಹೇಳಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಧುಗಿರಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಪರಮೇಶ್ವರ 2008ರಲ್ಲಿ ಕೊರಟಗೆರೆ ಮೀಸಲು ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದರು. ಆದರೆ, ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿಲ್ಲ. ಚುನಾವಣೆ ಹತ್ತಿರವಾಗಿದೆ ಎಂದು ಸಮಾವೇಶದ ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ. ಏನೇ ಪ್ರಯತ್ನಪಟ್ಟರು ಕೂಡ ಕೊರಟಗೆರೆ ಮತದಾರ ಹಗಲು ಕಂಡ ಬಾವಿಗೆ ರಾತ್ರಿ ಬೀಳುವುದಿಲ್ಲ ಎಂದಿದ್ದಾರೆ.
 
ಇವರು ಮಂತ್ರಿಯಾಗಿದ್ದಾಗ ಮಹಿಳೆಯರ ಸಬಲೀಕರಣಕ್ಕೆ ಯಾವುದೇ ಸಹಾಯ ಮಾಡದೆ,ಮನೆಗೆ ಹೋಗುವ ಕಾಲದಲ್ಲಿ ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ.ಇವರ ಕಾರ್ಯ ವೈಖರಿಗೆ ಕೊರಟಗೆರೆ ಕ್ಷೇತ್ರ ಜನ ಶಾಪ ಹಾಕುತ್ತಿದ್ದಾರೆ.ಇವರು ಏನೇ ಅಬ್ಬರದ ಪ್ರಚಾರ ಮಾಡಿದರು 
 
ಸದಾಶಿವ ವರದಿಯನ್ನು ಜಾರಿಗೆ ತರಲು ಪರಮೇಶ್ವರ್ ತೀವ್ರ ವಿರೋಧ ಮಾಡಿದ್ದಾರೆ. ಸಮಾಜ ಕಲ್ಯಾಣ ಸಚಿವರಿಗೆ ಬೆದರಿಕೆ ಹಾಕಿದ್ದಾರೆ. ಬಹುಸಂಖ್ಯಾತರಿಗೆ ಅನುಕೂಲವಾಗಬಾರದು ಎಂಬುದು ಪರಮೇಶ್ವರ್ ಧೋರಣೆಯಾಗಿದೆ ಎಂದು ಆರೋಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ