ಗೇಮ್ಸ್‌ಕ್ರಾಫ್ಟ್ ಜಿಎಸ್‍ಟಿ ಶೋಕಾಸ್ : ರದ್ದುಗೊಳಿಸಿದ ಹೈಕೋರ್ಟ್

ಶುಕ್ರವಾರ, 12 ಮೇ 2023 (18:04 IST)
ಬೆಂಗಳೂರು : ಆನ್ಲೈನ್ ಗೇಮಿಂಗ್ ಪ್ಲಾಟ್ಫಾರ್ಮ್ ಗೇಮ್ಸ್ಕ್ರಾಫ್ಟ್ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ ನೀಡಿದ್ದ ಶೋಕಾಸ್ ನೋಟಿಸ್ನ್ನು ಕರ್ನಾಟಕ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.
 
ಶೋಕಾಸ್ ನೋಟಿಸ್ಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ಆರ್ ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯತ್ವ ಪೀಠವು ವಿಚಾರಣೆ ನಡೆಸಿತು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಈ ಆದೇಶ ನೀಡಿತು.

ಗೇಮ್ಸ್ಕ್ರಾಫ್ಟ್ ಕಂಪನಿಯು 21,000 ಕೋಟಿ ರೂ. ತೆರಿಗೆ ಪಾವತಿಸಬೇಕು ಎಂದು ಈ ಹಿಂದೆ ನೀಡಿದ್ದ ನೋಟಿಸ್ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೂ ಸಹ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ ಶೋಕಾಸ್ ನೋಟಿಸ್ ನೀಡಿರುವುದು ಕಾನೂನು ಬಾಹಿರ ಮತ್ತು ದುರುದ್ದೇಶದಿಂದ ಕೂಡಿದೆ.

ಅಲ್ಲದೆ ಸ್ವತಃ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ರಮೇಶ್ ಪ್ರಭು ಅವರಿಗೆ ವೈಯಕ್ತಿಕ ದಂಡ ವಿಧಿಸಲಾಗಿದೆ ಎಂದು ಅರ್ಜಿಯಲ್ಲಿ ಎತ್ತಿ ತೋರಿಸಲಾಗಿದೆ ಎಂದು ಕಂಪನಿ ನ್ಯಾಯಾಲಯದ ಮುಂದೆ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ