ಬೆಂಗಳೂರು ನಗರದ ಒಳಗೆ ಮಧ್ಯಮ ಮತ್ತು ಲಘು ವಾಹನಗಳ ನಿಷೇಧಕ್ಕೆ ವಿರೋಧ

ಸೋಮವಾರ, 13 ಮಾರ್ಚ್ 2023 (20:41 IST)
ಬೆಂಗಳೂರು ಅಂದ್ರೇ ಸಾಕು ಥಟ್ಟನೆ ನೆನಪಾಗೋದು ಟ್ರಾಫಿಕ್. ಸಿಲಿಕಾನ್ ಸಿಟಿ ಟ್ರಾಫಿಕ್ ಅನುಭವಿಸಿದವರಿಗೆ ಗೊತ್ತು.ರಾಜಧಾನಿಯ ಟ್ರಾಫಿಕ್ ಕಡಿವಾಣಕ್ಕೆ ಟ್ರಾಫಿಕ್ ಕಮೀಷನರ್ ಕರ್ಮಷಿಯಲ್ ವೆಹಿಕಲ್ಸ್ ಗಳಿಗೆ ಟೈಮಿಂಗ್ ಕೊಟ್ಟು ನೋ ಎಂಟ್ರಿ ರೂಲ್ಸ್ ತಂದಿದ್ದಾರೆ. ಆದ್ರೇ ಈ ನಿಯಮ ವಿರೋಧಿಸಿ ಬೆಂಗಳೂರು ಕಮರ್ಷಿಯಲ್ ಟ್ರಕ್ ಅಸೋಸಿಯೇಷನ್ ವಿರೋಧಿಸಿದ್ದು,ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ ಮಾಡಲು ವಿವಿಧ ರೂಲ್ಸ್ ಗಳನ್ನು ಬೆಂಗಳೂರು ಸಂಚಾರಿ ಪೋಲಿಸರು ಜಾರಿಗೆ ತರುತ್ತಿದ್ದಾರೆ.ಅದ್ರಲ್ಲಿ ನಗರದ ಒಳಗೆ ಇಂತಿಷ್ಟೇ ಸಮಯದಲ್ಲಿ ಮಾತ್ರ ಮಧ್ಯಮ ಹಾಗೂ ಲಘು ಗಾತ್ರದ ವಾಣಿಜ್ಯ ವಾಹನಗಳನ್ನು ಚಲಾಯಿಸಬೇಕು ಎಂಬುದು ಸಹ ಒಂದಾಗಿದೆ.ಅಂದರೆ ಬೆಳಗ್ಗೆ 8 ಗಂಟೆಯಿಂದ-11 ಗಂಟೆವರೆಗೂ ಹಾಗೂ ಸಾಯಂಕಾಲ 5 ಗಂಟೆಯಿಂದ-8 ಗಂಟೆವರೆಗೂ ಪೀಕ್ ಟೈಮ್ ನಲ್ಲಿ ಬೆಂಗಳೂರು ನಗರದವೊಳಗೆ ಗೂಡ್ಸ್ ಹಾಗೂ ಲಾರಿಗಳ ಪ್ರವೇಶಕ್ಕೆ ಎಂಟ್ರಿಯಿಲ್ಲ.ಈ ನಿಯಮವನ್ನು ಬೆಂಗಳೂರು ಲಾರಿ ಮಾಲೀಕರ ಒಕ್ಕೂಟ ವಿರೋಧಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ