ಗಂಡು ನಾಯಿಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿದ ಹುಡುಗಿಯರು

ಭಾನುವಾರ, 4 ಆಗಸ್ಟ್ 2019 (17:42 IST)
ದೇಶಾದ್ಯಂತ ಸ್ನೇಹಿತರ ದಿನಾಚರಣೆ ಆಚರಣೆ ನಡೆಯುತ್ತಿದೆ. ಆದರೆ ಇಲ್ಲೊಂದಿಷ್ಟು ಜನರು ವಿಶಿಷ್ಟವಾಗಿ ಗೆಳೆಯರ ದಿನ ಮಾಡಿದ್ದಾರೆ.

ಸ್ನೇಹಿತರು ಪರಸ್ಪರ ಬ್ಯಾಂಡ್ ಕಟ್ಟಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಆದ್ರೆ ದಾವಣಗೆರೆಯ ಕೆಲ ಪುಟ್ಟ ಮಕ್ಕಳು ವಿನೂತನವಾಗಿ ಸ್ನೇಹಿತರ ದಿನಾಚರಣೆ ಆಚರಿಸಿದ್ರು.  

ದಾವಣಗೆರೆಯ ಕೆಬಿ ಬಡಾವಣಗೆರೆಯ ಸೋನಿ ಎನ್ನುವ ಸಾಕು ನಾಯಿಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿ ಶುಭಾಶಯ ತಿಳಿಸಿದ್ರು. ಸೋನು ಕೆಬಿ ಬಡಾವಣೆಯಲ್ಲಿ ಪ್ರತಿಯೊಬ್ಬರಿಗೂ ಪ್ರೀತಿ ಪಾತ್ರವಾದ ನಾಯಿಯಾಗಿದೆ. ಪ್ರತಿಯೊಬ್ಬರ ಬಳಿ ಸ್ನೇಹಮಯವಾಗಿ ಇರುತ್ತದೆ.

ಆದ್ದರಿಂದ ಕೇವಲ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳಿಗೂ ಸ್ನೇಹಿತರ ದಿನಾಚರಣೆ ಆಚರಣೆ ಮಾಡಿಕೊಳ್ಳಬೇಕು ಎಂದು ವಿನೂತನವಾಗಿ ಮಕ್ಕಳು, ಯುವತಿಯರು ಹಾಗೂ ನಾಯಿ ಮಾಲೀಕ ನಾಗಭೂಷಣ್ ಸೇರಿಕೊಂಡು ಸೋನು ನಾಯಿಯ ಕೈಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿ ಸ್ನೇಹಿತರ ದಿನಾಚರಣೆಯನ್ನು ಆಚರಣೆ ಮಾಡಿ ಸಂಭ್ರಮಿಸಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ