ಪಾಕಿಸ್ತಾನಕ್ಕೆ ಹೋಗಿ ಗೋವು ತಿನ್ನಿ ಎಂದ ಶಾಸಕ

ಸೋಮವಾರ, 9 ಸೆಪ್ಟಂಬರ್ 2019 (19:56 IST)
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಬೇಕು. ಗೋವು ತಿನ್ನಬೇಕಾದರೆ ಪಾಕಿಸ್ತಾನಕ್ಕೆ ಹೋಗಿ ತಿನ್ನಿ. ಹೀಗಂತ ಬಿಜೆಪಿ ಶಾಸಕ ಹೇಳಿದ್ದಾರೆ.

ಗೋಹತ್ಯೆಯನ್ನು ಯಾವುದೇ ಕಾರಣಕ್ಕೂ ಸಹಿಸೋದಿಲ್ಲ. ಗೋವು ತಿನ್ನೋರು ಪಾಕ್ ಗೆ ಹೋಗಿ. ಹೀಗಂತ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಗಣೇಶ ವಿಸರ್ಜನೆ ಮಹಾಮಂಡಳಿ ಸಮಾರಂಭದಲ್ಲಿ ಮಾತನಾಡಿದ ಅವರು, 80 ಪ್ರತಿಶತ ಇರೋ ಹಿಂದುಗಳಿಗಾಗಿ ನಮ್ಮ ದೇಶವಿದೆ. 8 ಪ್ರತಿಶತ ಇರೋರಿಗಾಗಿ ಅಲ್ಲ. ಗೋ ಹತ್ಯೆ ನಿಷೇಧ ಮಾಡಲು ಸಿಎಂ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ರು.

ಗೋ ಹತ್ಯೆ ಮಾಡಿದ್ದಕ್ಕೆ ಪಾಕಿಸ್ತಾನದಲ್ಲಿ ಹಾಲು ಸಿಗುತ್ತಿಲ್ಲ ಅಂತ ಟೀಕೆ ಮಾಡಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ