ಮೋದಿಯನ್ನು ಪಾಕ್ ಪ್ರಧಾನಿಗೆ ಹೋಲಿಸಿದ ಸಚಿವ

ಭಾನುವಾರ, 8 ಸೆಪ್ಟಂಬರ್ 2019 (20:07 IST)
ಪ್ರಧಾನಿ ನರೇಂದ್ರ ಮೋದಿಯನ್ನ ಪಾಕ್ ಪ್ರಧಾನಿಗೆ ಹೋಲಿಸಿದ್ದಾರೆ ಮಾಜಿ ಸಚಿವರೊಬ್ಬರು.

ಮಾಜಿ ಸಚಿವ ರಮಾನಾಥ್ ರೈ ಮಂಗಳೂರಿನ ಕಾಂಗ್ರೆಸ್ ‌ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡುತ್ತಾ, ಮೋದಿ ಮತ್ತು‌ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳು ಎಂದು ವ್ಯಂಗ್ಯವಾಡಿದ್ದಾರೆ.

ಪಾಕ್ ನಲ್ಲಿ ಅವರು ಅಲ್ಲಿ ಗೆಲ್ಲಲು ಭಾರತವನ್ನು ಬೈಯ್ಯುತ್ತಾರೆ. ಇವರು ಇಲ್ಲಿ ಗೆಲ್ಲಲು ಪಾಕಿಸ್ತಾನವನ್ನ ಬೈಯುತ್ತಾರೆ. ಈ ಇಬ್ಬರು ಕೂಡ ಒಂದೇ ರೀತಿಯ ಜನರಾಗಿದ್ದಾರೆ.

ಅವನು ಹೇಗೋ ಸರಿಯಲ್ಲ, ಇವರು ಕೂಡ ಅದೇ ದಾರಿಯಲ್ಲಿ ಇದ್ದಾರೆ ಅಂತ ಟೀಕೆ ಮಾಡಿದ್ರು.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ