ಚಿನ್ನ ಖರೀದಿದಾರರಿಗೆ ಗುಡ್‌ನ್ಯೂಸ್‌

ಶುಕ್ರವಾರ, 26 ಆಗಸ್ಟ್ 2022 (19:14 IST)
ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನಾಭರಣಗಳ ಬೆಲೆಯಲ್ಲಿ ಭಾರೀ ಇಳಿಕೆಯನ್ನು ಕಂಡಿದೆ. ಮಾರುಕಟ್ಟೆಯಲ್ಲಿ ಚಿನ್ನಾಭರಣಗಳ ಬೆಲೆ ಎಷ್ಟಿದೆ  ಎಂದು ತಿಳಿದುಕೊಳ್ಳುವ ಕುತೂಹಲ ಚಿನ್ನ ಖರೀದಿದಾರರಿಗೆ ಸಹಜ.ಹಲವು ದಿನಗಳಿಂದಲೂ ಏರಿಕೆಯನ್ನು ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು ಎಂಬುದನ್ನು ಆಭರಣ ಪ್ರಿಯರಿಗಾಗಿ ಇಲ್ಲಿ ನೀಡಲಾಗಿದೆ.

ಆಗಸ್ಟ್ 26, ಶುಕ್ರವಾರ ಬೆಳಿಗ್ಗೆ, ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್) ಚಿನ್ನದ ಬೆಲೆ ರೂ.5,182 ರಲ್ಲಿ ದಾಖಲಾಗಿದೆ. ಬೆಂಗಳೂರಿನಲ್ಲಿ, 1 ಗ್ರಾಂ (24 ಕ್ಯಾರೆಟ್) ಚಿನ್ನ ರೂ.5,187 ಕ್ಕೆ ನಿಗದಿಯಾಗಿದೆ. ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ 10 ಗ್ರಾಂ (22 ಕ್ಯಾರೆಟ್) ಚಿನ್ನ ರೂ.47,550 ಕ್ಕೆ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ 51,870 ರೂ.ಗೆ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ