ನಬಾರ್ಡ ಮೊರೆ ಹೋದ ಸರಕಾರ

ಸೋಮವಾರ, 13 ಆಗಸ್ಟ್ 2018 (20:08 IST)
ರಾಜ್ಯದ 22 ಲಕ್ಷ ರೈತರು ವಿವಿಧ ಸಹಕಾರ ಹಾಗೂ 28 ಲಕ್ಷ ರೈತರು ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಹೀಗಾಗಿ ನಬಾರ್ಡನಿಂದ ಶೇ. 75ರಷ್ಟು ಆರ್ಥಿಕ ನೆರವಿಗೆ ಮನವಿ ಮಾಡಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದ್ದಾರೆ.

ಸಣ್ಣ ಪ್ರಮಾಣದಲ್ಲಿ ಸಹಕಾರ ಬ್ಯಾಂಕುಗಳ ಮೂಲಕ ಸಾಲ ಒದಗಿಸಲು ಶೇ. 75ರಷ್ಟು ಆರ್ಥಿಕ ನೆರವು ನೀಡುವಂತೆ ಕೇಂದ್ರದ ಕೃಷಿ ಸಚಿವರಿಗೆ ಮನವಿ ಮಾಡಲಾಗಿದೆ. ನಬಾರ್ಡ ಪ್ರಸ್ತುತ ಶೇ. 40ರಷ್ಟು ಆರ್ಥಿಕ ನೆರವು ನೀಡುತ್ತಿದೆ. ಶೇ. 75ರಷ್ಟು ನೆರವು ನೀಡಿದರೆ 2500 ಕೋಟಿ ರೂ. ಸಾಲಕ್ಕಾಗಿ ಸಿಗಲಿದೆ ಎಂದು ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದ್ದಾರೆ.

ಮುಂಬರುವ ವರ್ಷದಲ್ಲಿ ಹೊಸದಾಗಿ 15 ಲಕ್ಷ ರೈತರಿಗೆ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದೂ ಅವರು ಹೇಳಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ