ಬೆಂಗಳೂರು: ತಿಂಗಳಿಗೊಮ್ಮ ಗೃಹಲಕ್ಷ್ಮಿ ಹಣ ಕೊಡ್ತೀವಿ ಎಂದಿದ್ದ ಸರ್ಕಾರ ಈಗ ಉಲ್ಟಾ ಹೊಡೆದಂತಿದೆ. ತಿಂಗಳಿಗೊಮ್ಮೆ ಅಲ್ಲ ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡ್ತೀವಿ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ಎಂ ರೇವಣ್ಣ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಪ್ರತಿ ತಿಂಗಳಿಗೊಮ್ಮೆ ಮನೆಯ ಯಜಮಾನಿಯ ಖಾತೆಗೆ 2,000 ರೂ. ಕೊಡುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಆದರೆ ಪ್ರತೀ ತಿಂಗಳು ಹಣ ಬರ್ತಿಲ್ಲ ಎಂದು ಮಹಿಳೆಯರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಲೇ ಇರುತ್ತಾರೆ.
ಇದೀಗ ಎಚ್ಎಂ ರೇವಣ್ಣ ಗ್ಯಾರಂಟಿ ಯೋಜನೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಪ್ರತೀ ತಿಂಗಳು ಹಣ ಕೊಡುವುದಕ್ಕೆ ಕೆಲವು ತೊಡಕುಗಳಿವೆ. ಹೀಗಾಗಿ ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ಎಚ್ ಎಂ ರೇವಣ್ಣ ಹೇಳಿದ್ದಾರೆ.
ಜಿಎಸ್ ಟಿ ವಿಚಾರದಲ್ಲಿ 1 ಲಕ್ಷದ 20 ಸಾವಿರ ಜನರಿಗೆ ಹಣ ಹೋಗಿರಲಿಲ್ಲ. ಅದರಲ್ಲಿ 58 ಸಾವಿರ ಜನರ ಸಮಸ್ಯೆ ಸರಿಪಡಿಸಿದ್ದೇವೆ. ನಾವು ಅಧಿಕಾರಕ್ಕೆ ಬಂದಾಗಿನಿಂದ ಹಲವು ತೊಡಕುಗಳಿಂದ ಪ್ರತೀ ತಿಂಗಳು ಹಣ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರತೀ ತಿಂಗಳು ಕೊಡಲಾಗುತ್ತಿಲ್ಲ ಎಂದಿದ್ದಾರೆ.