ಜಿಟಿ ಮಾಲ್ ಬಂದ್: ಇದಪ್ಪಾ ರೈತರ ತಾಕತ್ತು

Krishnaveni K

ಶುಕ್ರವಾರ, 19 ಜುಲೈ 2024 (09:59 IST)
Photo Credit: X
ಬೆಂಗಳೂರು: ಪಂಚೆ ಉಟ್ಟುಕೊಂಡು ಬಂದಿದ್ದ ಹಾವೇರಿ ಮೂಲದ ರೈತನನ್ನು ಒಳಗೆ ಬಿಡದೇ ಅವಮಾನಿಸಿದ ಮಾಗಡಿ ರಸ್ತೆಯ ಜಿಟಿ ಮಾಲ್ ಈಗ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಮತ್ತೊಮ್ಮೆ ಕ್ಷಮೆ  ಯಾಚಿಸಿದೆ. ಇದನ್ನು ನೋಡಿ ನೆಟ್ಟಿಗರು ಇದಪ್ಪಾ ರೈತರ ತಾಕತ್ತು ಎಂದಿದ್ದಾರೆ.

ಈ ವಿಚಾರ ನಿನ್ನೆ ಸದನದಲ್ಲೂ ಪ್ರಸ್ತಾಪವಾಗಿತ್ತು. 7 ದಿನ ಮಾಲ್ ಬಂದ್ ಮಾಡಿಸುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದ್ದರು. ಅಲ್ಲದೆ, ಈ ಬಗ್ಗೆ ಬಿಬಿಎಂಪಿ ಕಮಿಷನರ್ ಜೊತೆ ಮಾತನಾಡುವುದಾಗಿಯೂ ಹೇಳಿದ್ದರು. ಅದರಂತೆ ಇದೀಗ ಬಿಬಿಎಂಪಿ ಕಮಿಷನರ್ ಮಾಲ್ ಮಾಲಿಕರಿಗೆ ಸೂಚನೆ ನೀಡಿದ್ದಾರೆ.

ಬಿಬಿಎಂಪಿಯಿಂದ ಸೂಚನೆ ಬಂದ ಬೆನ್ನಲ್ಲೇ ಜಿಟಿ ಮಾಲ್ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಲ್ಲದೆ ಮತ್ತೊಮ್ಮೆರೈತನಿಗೆ ಕ್ಷಮೆ ಯಾಚನೆ ಮಾಡಿದೆ. ಅಷ್ಟೇ ಅಲ್ಲ ರೈತ ಫಕೀರಪ್ಪನ ಬಳಿ ಹೋಗಿ ವೈಯಕ್ತಿಕವಾಗಿ ನಾವೇ ಕ್ಷಮೆ ಕೇಳುತ್ತೇವೆ. ನಮಗೆ ಎರಡು ದಿನ ಕಾಲಾವಕಾಶ ಕೊಡಿ ಎಂದು ಮಾಲಿಕರು ಹೇಳಿದ್ದಾರೆ. ಸದ್ಯಕ್ಕೆ ಎಷ್ಟು ದಿನ ಎಂಬುದು ಸ್ಪಷ್ಟವಾಗಿಲ್ಲ.

ಇನ್ನು ಮಾಲ್ ಬಂದ್ ಆಗಿರುವ ಸುದ್ದಿ ತಿಳಿಯುತ್ತಿದ್ದಂತೇ ಪ್ರತಿಕ್ರಿಯಿಸಿರುವ ನೆಟ್ಟಿಗರು ಇದಪ್ಪಾ ರೈತರ ತಾಕತ್ತು ಎಂದರೆ. ರೈತರನ್ನು ಕೆಣಕಿ ಯಾರೂ ಈ ದೇಶದಲ್ಲಿ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಮುಂದೆ ಇಂತಹ ಕೃತ್ಯವೆಸಗುವವರಿಗೆಲ್ಲಾ ಇದು ಪಾಠವಾಗಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ