ವೇತನ ಹೆಚ್ಚಳಕ್ಕೆ ಹಣ ಬಿಡುಗಡೆ ಮಾಡಿದ್ರು ವೇತನ ಹೆಚ್ಚಳ ಮಾಡದ ಜಿವಿಕೆ ಕಂಪನಿ

ಶುಕ್ರವಾರ, 4 ನವೆಂಬರ್ 2022 (13:21 IST)
ದೇವರು ವರ ಕೊಟ್ಟರು ಪೂಜಾರಿ ವರ ಕೊಡ್ತಿಲ್ಲ ಅನ್ನುವಾಗೆ ರಾಜ್ಯ ಸರ್ಕಾರದ ಮಾತಿಗೆ ಜಿವಿಕೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ.ವೇತನ ಹೆಚ್ಚಳಕ್ಕೆ ಹಣ ಬಿಡುಗಡೆ ಮಾಡಿದ್ರು ವೇತನವನ್ನ ಜಿವಿಕೆ ಕಂಪನಿ ಹೆಚ್ಚಳ ಮಾಡಿಲ್ಲ.ಮತ್ತೊಮ್ಮೆ ರಾಜ್ಯಾದ್ಯಂತ  108 ಸಿಬ್ಬಂದಿಗಳು ಹೋರಾಟ ಮಾಡುವ ಎಚ್ಚರಿಕೆ ನೀಡಿದಾರೆ.
 
ಜಿವಿಕೆ ಕಂಪನಿಯನ್ನು ಕೂಡಲೇ ವಜಾ ಮಾಡುವಂತೆ ಒತ್ತಾಯ ಮಾಡಿದ್ದು,ಜಿವಿಕೆ ಕಂಪನಿಯು 108 ಸಿಬ್ಬಂದಿಗಳಿಗೆ ಎರಡು ತಿಂಗಳು ಸಂಬಳ ಬಿಡುಗಡೆ ಮಾಡಿರಲಿಲ್ಲ.ಅ ಸಂಧರ್ಭದಲ್ಲಿ ನೌಕರರು ಸಾಮೂಹಿಕ ರಜೆ ಹಾಕ್ತಿವಿ
ಎಂದು ಎಚ್ಚರಿಕೆ ನೀಡಿದ್ವಿ .ಅಂದು ಆರೋಗ್ಯ ಸಚಿವರು 
ಮಧ್ಯಪ್ರವೇಶ ‌ಮಾಡಿ ವೇತನದಲ್ಲಿ ಆಗಿರುವ ತಾರತಮ್ಯ ಸರಿಪಡಿಸುವಂತೆ ಆಯುಕ್ತರಿಗೆ ಸೂಚನೆ ನೀಡಿದ್ರು.ಈ ಹಿನ್ನಲೆಯಲ್ಲಿ ಆಯುಕ್ತರು ಕಳೆದ ಏಳನೇ ತಾರೀಖು ಜಿವಿಕೆ ಕಂಪನಿ ಮತ್ತು ನೌಕರರ ಜೊತೆಗೆ ಸಭೆ ನಡೆಸಿದರು. ಸುಮಾರು ವರ್ಷಗಳಿಂದ ಜಿವಿಕೆ ಕಂಪನಿ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಮಾಡಿರಲಿಲ್ಲ ಹಾಗಾಗಿ 45% ರಷ್ಟು ವೇತನ ಹೆಚ್ಚಳ ಮಾಡಲು ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು.ಅದಕ್ಕಾಗಿ ರಾಜ್ಯ ಸರ್ಕಾರ 31 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ರು.
 
ಆದರೆ ಈಗ ಜಿವಿಕೆ ಕಂಪನಿಯು ಸರ್ಕಾರ ಹೇಳಿದಂತೆ ವೇತನ ಹೆಚ್ಚಳ ಮಾಡಲು ಬರುವುದಿಲ್ಲ.‌ಹೈದ್ರಾಬಾದ್ ಹೆಡ್ ಆಫೀಸ್ ನಿಂದ ನಮಗೆ ವೇತನ ಹೆಚ್ಚಳ ಮಾಡಲು ಅನುಮತಿ ಸಿಕ್ಕಿಲ್ಲ ಎನ್ನುತ್ತಿದೆ.ಕೂಡಲೇ ರಾಜ್ಯ ಸರ್ಕಾರ ಇಂತಹ ನೀಚ ಕಂಪನಿ ಮೇಲೆ ಕ್ರಮ ಕೈಗೊಳ್ಳಬೇಕು.ಸರ್ಕಾರ ಸೂಚನೆ ನೀಡಿದಂತೆ ವೇತನ ಹೆಚ್ಚಳ ಮಾಡಿಲ್ಲ ಅಂದರೆ  108 ಸಿಬ್ಬಂದಿಗಳು ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ.ನಾವು ರಾಜ್ಯ ಸರ್ಕಾರದ ವಿರುದ್ಧ ಇಲ್ಲ, ಹಾಗಾಗಿ ಆರೋಗ್ಯ ಸಚಿವರು ಆರೋಗ್ಯ ಇಲಾಖೆಯ ಆಯುಕ್ತರು ಕೂಡಲೇ ಈ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡ್ತಿವಿ.ಹದಿಮೂರು ವರ್ಷಗಳಿಂದ ನಿರಂತರವಾಗಿ ಸಿಬ್ಬಂದಿಗಳ ಮೇಲೆ ಜಿವಿಕೆ ದಬ್ಬಾಳಿಕೆ ಮಾಡಿಕೊಂಡು ಬಂದಿದೆ.ಎಲ್ಲದಕ್ಕೂ ಹೈದ್ರಾಬಾದ್ ಹೆಡ್ ಆಫೀಸ್ ನಿಂದ ಅನುಮತಿ ಬೇಕು ಅಂದರೆ ಸಂಬಳ ಹೆಚ್ಚಳ ಮಾಡಲು ಕರ್ನಾಟಕ ಸರ್ಕಾರ ಹಣ ಬಿಡುಗಡೆ ಮಾಡಿರುವುದು.ಕೂಡಲೇ ರಾಜ್ಯ ಸರ್ಕಾರ ಈ ಕಂಪನಿಯನ್ನು ವಜಾ ಮಾಡಲಿ 108 ಸಿಬ್ಬಂದಿಗಳು ಮೂರು ತಿಂಗಳು ಉಚಿತವಾಗಿ ಸೇವೆ ನೀಡಲು ತಯಾರಿದ್ದೇವೆ ಎಂದು 108 ನೌಕರರ ಸಂಘದ ಉಪಾಧ್ಯಕ್ಷ ಎನ್ ಹೆಚ್ ಪರಮಶಿವ  ಆಕ್ರೋಶ ಹೊರಹಾಕಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ