ವಿಷು ಹಬ್ಬಕ್ಕೆ ಶುಭಕೋರಿದ ಸಿಎಂ
ಸೌರಮಾನ ಯುಗಾದಿ ವಿಷು ಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡುವ ಮೂಲಕ ರಾಜ್ಯದ ಜನತೆಗೆ ಶುಭಕೋರಿದ್ದಾರೆ.. ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಜನತೆಗೆ ಬಿಸು-ವಿಷು ಪರ್ಬೊದ ಎಡ್ಡೆಪ್ಪುಲು' ಎಂದು ಸಿಎಂ ಟ್ವೀಟಲ್ಲಿ ತುಳುವಿನಲ್ಲಿ ಜನತೆಗೆ ಯುಗಾದಿಗೆ ಶುಭ ಹಾರೈಸಿದ್ದಾರೆ..ಹೊಸ ಬೆಳೆಯನ್ನು ದೇವರಿಗೆ ಕಣಿ ಅರ್ಪಿಸಿ, ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿ ನೂತನ ವರ್ಷವನ್ನು ಸ್ವಾಗತಿಸುವುದು ವಿಷು ಹಬ್ಬದ ವಿಶೇಷತೆಯಾಗಿದೆ.