ಭಾರತದ ನಗರಗಳ ಮೇಲೆ ದಾಳಿ ನಡೆಸಲು ಸ್ಕೆಚ್ ರೂಪಿಸಿದ ಪಾಕ್

ಶುಕ್ರವಾರ, 23 ಸೆಪ್ಟಂಬರ್ 2016 (20:08 IST)
ಭಾರತ ಒಂದು ವೇಳೆ ದಾಳಿ ಮಾಡಿದಲ್ಲಿ ಯಾವ ಯಾವ ನಗರಗಳ ಮೇಲೆ ದಾಳಿ ಮಾಡಬೇಕು ಎನ್ನುವ ಬಗ್ಗೆ ಪಾಕಿಸ್ತಾನ ಸೇನೆ ನಿಖರವಾದ ಗುರಿಗಳನ್ನು  ಆಯ್ಕೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. 
 
ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ಸೇನೆ ಪಾಕಿಸ್ತಾನದ ಗಡಿ ದಾಟಿ ನುಗ್ಗಿದಲ್ಲಿ ಯಾವ ರೀತಿ ಪ್ರತಿದಾಳಿ ನಡೆಸಬೇಕು ಎನ್ನುವ ಬಗ್ಗೆ ಪಾಕ್ ಸೇನೆ ಸಿದ್ದತೆ ನಡೆಸಿದೆ ಎನ್ನಲಾಗಿದೆ. 
 
ಭಾರತದಿಂದ ಎದುರಾಗುವ ಯಾವುದೇ ಸೇನಾ ಕಾರ್ಯಾಚರಣೆಯನ್ನು ಎದುರಿಸಲು ಪಾಕ್ ಸೇನೆ ಸಿದ್ದವಾಗಿದೆ. ನಾವು ರಣತಂತ್ರ ರೂಪಿಸಿದ್ದೇವೆ. ಭಾರತದಲ್ಲಿ ಯಾವ ಯಾವ ನಗರಗಳ ಮೇಲೆ ದಾಳಿ ಮಾಡಬೇಕು ಎನ್ನುವ ಬಗ್ಗೆ ನಿಖರ ಮಾಹಿತಿ ಹೊಂದಿದ್ದೇವೆ ಎಂದು ಪಾಕ್ ರಕ್ಷಣಾ ಅದಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
 
ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದ ಕೂಡಲೇ ಪ್ರತಿದಾಳಿ ನಡೆಸುವಷ್ಟು ಸಶಕ್ತವಾಗಿದ್ದೇವೆ. ನಾವು ಈಗಾಗಲೇ ಗುರಿಗಳನ್ನು ಗುರುತಿಸಿದ್ದೇವೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.
 
ಉತ್ತರ ಕಾಶ್ಮಿರದ ಉರಿ ಸೇನಾಕೇಂದ್ರದ ಮೇಲೆ ನಡೆದ ಉಗ್ರರ ದಾಳಿಯ ಹಿಂದಿರುವ ಶಕ್ತಿಗಳನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿರುವುದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ