ಹಾವೇರಿ: ಇಲ್ಲಿನ ಸ್ವಾತಿ ಎಂಬ ಹಿಂದೂ ಯುವತಿಯ ಹತ್ಯೆ ಮಾಡಿದ್ದ ನಯಾಜ್ ಎಂಬ ಆರೋಪಿಗೆ ಸಹಾಯ ಮಾಡಿದ್ದ ಇಬ್ಬರು ಹಿಂದೂ ಸ್ನೇಹಿತರನ್ನೂ ಪೊಲೀಸರು ಬಂಧಿಸಿದ್ದಾರೆ.
ಸ್ವಾತಿಯನ್ನು ಪ್ರೀತಿಸುತ್ತಿದ್ದ ನಯಾಜ್ ಬಳಿಕ ಆಕೆಗೆ ಕೈ ಕೊಟ್ಟು ತನ್ನದೇ ಧರ್ಮದ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದ. ಇದರಿಂದ ಸಿಟ್ಟಿಗೆದ್ದ ಸ್ವಾತಿ ಬೇರೆಯವರನ್ನು ಮದುವೆಯಾದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದ್ದಳು. ಇದೇ ಕಾರಣಕ್ಕೆ ಇಬ್ಬರು ಹಿಂದೂ ಸ್ನೇಹಿತರೊಂದಿಗೆ ಚರ್ಚಿಸಿ ಸ್ವಾತಿಯನ್ನು ನಯಾಜ್ ಹತ್ಯೆ ಮಾಡಿದ್ದ.
ಘಟನೆ ಬಗ್ಗೆ ಹಿಂದೂ ಸಂಘಟನೆಗಳು, ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇದೂ ಮತ್ತೊಂದು ಲವ್ ಜಿಹಾದ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದವು. ಇದರ ಬೆನ್ನಲ್ಲೇ ಪೊಲೀಸರು ಪ್ರಮುಖ ಆರೋಪಿ ನಯಾಜ್ ನನ್ನು ಬಂಧಿಸಿದ್ದರು.
ಇದೀಗ ನಯಾಜ್ ಗೆ ಸಹಾಯ ಮಾಡಿದ್ದ ದುರ್ಗಾಚಾರಿ ಮತ್ತು ವಿನಯ್ ಎಂಬವರನ್ನೂ ಪೊಲೀಸರು ಬಂದಿಸಿದ್ದಾರೆ. ಘಟನೆ ಬಳಿಕ ಎಲ್ಲಾ ಆರೋಪಿಗಳೂ ತಲೆಮರೆಸಿಕೊಂಡಿದ್ದರು. ನಯಾಜ್ ಕೊಲೆ ಮಾಡುವಾಗ ಈ ಇಬ್ಬರೂ ಸಾಥ್ ನೀಡಿದ್ದರು.