ಸಿಎಂ ಪುತ್ರನ ವಿರುದ್ದ ವರ್ಗಾವಣೆ ದಂದೆ ಆರೋಪ ಮಾಡಿದ ಹೆಚ್ ಡಿಕೆ
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲೇ ಸಿಎಂ ವಿರುದ್ದ ಮಾಜಿ ಸಿಎಂ ಕುಮಾರಸ್ವಾಮಿ ಗಂಬೀರ ಆರೋಪ ಮಾಡಿದ್ದಾರೆ. ವರ್ಗಾವಣೆಯಲ್ಲಿ ಸಿಎಂ ಕಚೇರಿ ದುರ್ಬಳಕೆ ಮಾಡಿಕೊಂಡು ಒಂದೇ ಹುದ್ದೆಗೆ ನಾಲ್ವರ ಹೆಸರನ್ನ ಶಿಫಾರಸ್ಸು ಮಾಡಲಾಗಿದೆ ಅಂತಾ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಲೆಕ್ಕಾಧಿಕಾರಿ ಹುದ್ದೆಗೆ ನಾಲ್ವರಿಗೆ ವರ್ಗಾವಣೆಗೆ ಶಿಫಾರಸು ಮಾಡಿರೋದು ದಾಖಲೆ ಸಮೇತ ಸಾಬೀತಾಗಿದೆ ಅಂತ ಟ್ವೀಟ್ ಮೂಲಕ ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದಾರೆ