ಕೊಲೆ ಮಾಡಿ ಆತ್ಮಹತ್ಯೆಯ ಹೈ ಡ್ರಾಮ‌ ಕ್ರಿಯೇಟ್ ಮಾಡಿದ್ದ

ಶುಕ್ರವಾರ, 28 ಜುಲೈ 2023 (19:41 IST)
ಸಪ್ತಪದಿ ತುಳಿದು ಜೀವನಪರ್ಯಂತ ಜೊತೆಗಿರ್ತೇನೆ ಎಂದಿದ್ದ, ಇವನೇ ನನ್ನ ಸರ್ವಸ್ವ ಅಂತ ನಂಬಿ ಬಂದಿದ್ದಾಕೆ, ಕೇವಲ ಒಂದೂವರೇ ವರ್ಷಕ್ಕೆ ಸಂಸಾರದ ನೌಕೆಯನ್ನ ಮುಳುಗಿಸಿದ ಗಂಡ ಮಡದಿಯನ್ನ ಬಾರದ ಲೋಕಕ್ಕೆ ಕಳುಹಿಸಿದ್ದಾನೆ.ಸಿಲಿಕಾನ್ ಸಿಟಿಗೆ ಬಂದು, ಬಾಣಸವಾಡಿಯ ಹೆಚ್ ಆರ್ ಬಿಆರ್ ಲೇಔಟ್ ನಲ್ಲಿ ವಾಸವಾಗಿದ್ದರು. ಆರಂಭದಲ್ಲಿ ‌ಎಲ್ಲಾವೂ ಚೆನ್ನಾಗಿಯೇ ಇತ್ತು, ಯಾಕೋ ಬರ್ತ ಬರ್ತಾ ಇಬ್ಬರ ಮದ್ಯೇ ಕಿರಿಕ್ ಶುರುವಾಗಿತ್ತು ಸಂಸಾದರಲ್ಲಿ ಕೂಡ ಬಿರುಕು ಮೂಡಿತ್ತು.

ಇತ್ತೀಚೆಗೆ ಸಂಸಾರದಲ್ಲಿ ಜಗಳ ಸಾಮಾನ್ಯವಾಗಿತ್ತು ಇದರಿಂದ ಕುಪಿತಗೊಂಡಿದ್ದ ಸಿದ್ದಪ್ಪ ಬಸವರಾಜ್ ನಿನ್ನೆ ಕೆಂಚಮ್ಮಳ ಉಸಿರುಗಟ್ಟಿಸಿ ಹತ್ಯೆ ಮಾಡಿ ಪ್ಯಾನಿಗೆ ನೇಣು ಹಾಕಿಕೊಂಡಿರುವ ಹಾಗೇ  ಕ್ರೈಂ‌ಸೀನ್ ಕ್ರಿಯೆಟ್ ಮಾಡಿದ್ದ ನಂತರ ಕೆಂಚಮ್ಮಳ ಅಮ್ಮನಿಗೆ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಿ ಕರೆಸಿದ್ದ ಇನ್ನೂ ಇವರ ಸಂಸಾರದ ‌ಜಗಳದ ಬಗ್ಗೆ ಮಗಳು ಕೂಡ ಸಾಕಷ್ಟು ಸಲ ಹೇಳಿಕೊಂಡಿದ್ದಳು ಇದರಿಂದ ‌ಅನುಮಾನಗೊಂಡು ಬಾಣಸವಾಡಿ ಪೊಲೀಸರಿಗೆ ದೂರ.ಪ್ರಕರಣ ದಾಖಲಿಸಿಕೊಂಡಿ ತನಿಖೆ ಮಾಡಿದ ಪೊಲೀಸರ ‌ಮುಂದೆ ಮೊದಲು ಆತ್ಮಹತ್ಯೆ ಅಂತಾನೇ ಹೇಳಿದ್ದಾನೆ ಆದ್ರೇ ಪೊಲೀಸರ ವರ್ಸೆ ತೋರಿಸಿದ ನಂತರ ಕೊಲೆ ಮಾಡಿರೋದಾಗಿ‌ ಒಪ್ಪಿಕೊಂಡಿದ್ದಾನೆ. ಜೀವನ‌ ಪೂರ್ತಿ ಜೊತೆ ಯಲ್ಲಿ ಇರ್ತೇನೆ ಅಂದವನು ಉಸಿರು ನಿಲ್ಲಿಸಿದ್ದು ಮಾತ್ರ ದುರಂತವೇ ಸರಿ.
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ