ಎಲ್ಲಾ ಪಟಾಕಿ ಮಾಯೆ: ವಾಯು ಮಾಲಿನ್ಯದಿಂದ ಕಣ್ಣುರಿ, ಕೆಮ್ಮು ಗಿಫ್ಟ್

Krishnaveni K

ಶನಿವಾರ, 2 ನವೆಂಬರ್ 2024 (08:50 IST)
ಬೆಂಗಳೂರು: ದೀಪಾವಳಿ ಹಬ್ಬದ ನಿಮಿತ್ತ ಜನ ಎಲ್ಲಾ ಕಡೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದೇನೋ ಸರಿ. ಆದರೆ ಇದರಿಂದಾಗಿ ನಗರದ ವಾಯು ಮಾಲಿನ್ಯ ತೀರಾ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ.

ನಿನ್ನೆ ಬಹುತೇಕರು ದೀಪಾವಳಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಥರ ಥರದ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ಇದರಿಂದ ವಾಯು ಮಾಲಿನ್ಯ ವಿಪರೀತ ಮಟ್ಟಕ್ಕೆ ಹೋಗಿದೆ. ರಸ್ತೆಯಲ್ಲಿ ಓಡಾಡಲೂ ಆಗದಷ್ಟು ಹೊಗೆಯ ವಾತಾವರಣ. ಮನೆಯ ಬಾಗಿಲು ತೆರೆದಿಟ್ಟರೆ ಮನೆಯೊಳಗೆಲ್ಲಾ ಧೂಮ.

ದೀಪಾವಳಿ ಮೊದಲ ದಿನ ಮಳೆಯಾಗಿದ್ದರಿಂದ ಕೊಂಚ ಮಟ್ಟಿಗೆ ಹೊಗೆ ಕಡಿಮೆಯಾಗಿತ್ತು. ಆದರೆ ನಿನ್ನೆ ಕೊಂಚ ಹೆಚ್ಚೇ ಇತ್ತು ಎನ್ನಬಹುದು. ಇದರಿಂದಾಗಿ ಹಲವರು ಕೆಮ್ಮು, ತಲೆನೋವು, ಅಸ್ತಮಾ, ಕಣ್ಣು ಉರಿಯಂತಹ ಆರೋಗ್ಯ ಸಮಸ್ಯೆಯಿಂದ ಬಳಲುವಂತಾಗಿದೆ.

ಪಟಾಕಿಗಳಲ್ಲಿನ ರಾಸಾಯನಿಕ ವಾತಾವರಣ ಹಾಳು ಮಾಡುವುದಲ್ಲದೆ ಆರೋಗ್ಯವನ್ನೂ ಕೆಡಿಸಿದೆ. ಪ್ರತೀ ವರ್ಷ ಸರ್ಕಾರ ಎಷ್ಟೇ ನಿಬಂಧನೆಗಳನ್ನು ಹಾಕಿದರೂ ಜನನಿಬಿಡ ನಗರ ಪ್ರದೇಶಗಳಾದ ಬೆಂಗಳೂರಿನಂತಹ ಸ್ಥಳಗಳಲ್ಲಿ ಪಟಾಕಿ ಹೊಗೆಯಿಂದ ವಾಯು ಮಾಲಿನ್ಯ ಮತ್ತು ಆರೋಗ್ಯ ಸಮಸ್ಯೆಗಳಾಗುವುದು ತಪ್ಪುವುದಿಲ್ಲ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ