ಇನ್ಮುಂದೆ ನೈಸ್‌ ರೋಡ್‌ನಲ್ಲಿ ರಾತ್ರಿ 10 ನಂತ್ರ ಬೈಕ್‌ ಓಡಿಸುವ ಹಾಗಿಲ್ಲ

Sampriya

ಶುಕ್ರವಾರ, 2 ಆಗಸ್ಟ್ 2024 (19:32 IST)
Photo Courtesy X
ಬೆಂಗಳೂರು: ನೈಸ್ ರೋಡ್‌ನಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುಬವ ಕಾರಣ ರಾತ್ರಿ ವೇಳೆ ದ್ವಿ ಚಕ್ರ ವಾಹನಗಳ ಓಡಾಟ ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಆದೇಶ ಹೊರಡಿಸಿದೆ.

ಅದರಂತೆ ರಾತ್ರಿ 10ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ದ್ವಿಚಕ್ರ ವಾಹನಗಳು ಇನ್ಮುಂದೆ ಓಡಾಟ ನಡೆಸುವಂತಿಲ್ಲ. ಅದಲ್ಲದೆ ಅಪಘಾತಗಳನ್ನು ನಿಯಂತ್ರಿಸಲು ಬೆಂಗಳೂರಿನ ನೈಸ್ ರಸ್ತೆಯಲ್ಲಿ ವಾಹನಗಳ ವೇಗದ ಮಿತಿ ಅಳವಡಿಕೆ ಮಾಡಲಾಗಿದೆ.

ನಿಯಮ ಪಾಲನೆ ಜೊತೆಗೆ ಮಾರ್ಗ ಸೂಚಿಗಳಿದರೂ  ಅವುಗಳನ್ನು ವಾಹನ ಚಾಲಕರು ಪಾಲನೆ ಮಾಡುತ್ತಿಲ್ಲ. ಅಜಾಗರೂಕತೆ ಚಾಲನೆ, ನಿರ್ಲಕ್ಷ್ಯತೆಯಿಂದ ರಸ್ತೆ ಅಪಘಾತ ಹೆಚ್ಚಾಗುತ್ತಿವೆ. ಈ ಹಿನ್ನೆಲೆ‌ ನೈಸ್ ರಸ್ತೆಯ ಸುತ್ತುಮುತ್ತಲಿನರು ಒಟ್ಟು ಎಂಟು ಸಂಚಾರಿ ಪೊಲೀಸ್​ ಠಾಣೆಯ ಠಾಣಾಧಿಕಾರಿಗಳು ವರದಿಯನ್ನು ಆಧರಿಸಿ ಪೊಲೀಸ್ ಆಯುಕ್ತರು ಈ ಆದೇಶವನ್ನು ಹೊರಡಿಸಿದ್ದಾರೆ.

ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ