ನಾವು ಅಲ್ಲಾ ಅಂತೀವಿ, ನೀವು ದೇವರು ಅಂತೀರಿ ಅಷ್ಟೇ: ನಾಲಾಯಕ ನಾನಲ್ಲ ಎಂದ ಜಮೀರ್ ಅಹ್ಮದ್

Krishnaveni K

ಬುಧವಾರ, 30 ಅಕ್ಟೋಬರ್ 2024 (09:42 IST)
ಹುಬ್ಬಳ್ಳಿ: ವಕ್ಫ್ ಬೋರ್ಡ್ ನೋಟಿಸ್ ನೀಡಿರುವ ವಿಚಾರದಲ್ಲಿ ವಿಜಯಪುರದಲ್ಲಿ ಪ್ರತಿಭಟನೆ, ಸತ್ಯಶೋಧನಾ ಸಮಿತಿ ಭೇಟಿ ನೀಡಿರುವ ಬಗ್ಗೆ ವಕ್ಫ್ ಸಚಿವ ಜಮೀರ್ ಅಹ್ಮದ್ ತಿರುಗೇಟು ನೀಡಿದ್ದಾರೆ.

ವಿಜಯಪುರದಲ್ಲಿ ನೂರಾರು ರೈತರಿಗೆ ನೋಟಿಸ್ ನೀಡಿರುವ ವಿಚಾರವಾಗಿ ಪ್ರತಿಭಟನೆ ನಡೆಸಲಾಗಿದೆ. ನಿನ್ನೆ ತಡರಾತ್ರಿ ಕೂಡಾ ರೈತರ ಪ್ರತಿಭಟನೆ ನಡೆದಿದೆ. ಆದರೆ ಇಷ್ಟೆಲ್ಲಾ ರಂಪಾಟದ ನಡುವೆಯೂ ವಕ್ಫ್ ಸಚಿವ ಜಮೀರ್ ಹ್ಮದ್ ರೈತರಿಗೆ ನೋಟಿಸ್ ನೀಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ವಕ್ಫ್ ಆಸ್ತಿ ಆಗಲೀ, ಮುಜರಾಯಿ ಇಲಾಖೆಯ ಆಸ್ತಿ ಆಗಲೀ ಅದು ದೇವರ ಆಸ್ತಿ. ಆಯಾ ಸಮುದಾಯದವರು ಸಮುದಾಯಕ್ಕೆ ಒಳಿತಾಗಲಿ ಎಂದು ದಾನ ಮಾಡುತ್ತಾರೆ. ವಕ್ಫ್ ಬೋರ್ಡ್ ನಿಂದ ರೈತರಿಗೆ ಯಾವುದೇ ಅನ್ಯಾಯ ಮಾಡುತ್ತಿಲ್ಲ. ನೋಟಿಸ್ ನೀಡಿರುವ ವಿಚಾರದಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಜಗ್ಗಲ್ಲ ಎಂದಿದ್ದಾರೆ.

ಮುಜರಾಯಿ ಬೇರೆ ಅಲ್ಲ, ವಕ್ಫ್ ಬೇರೆ ಅಲ್ಲ. ನೀವು ದೇವರು ಅಂತೀರಿ, ನಾವು ಅಲ್ಲಾ ಅಂತೀವಿ ಅಷ್ಟೇ. ರಾಜಕೀಯಕ್ಕಾಗಿ ಜಾತಿವಾದ ಮಾಡುವ ನಾಲಾಯಕ್ಕು ನಾನಲ್ಲ. ಅನಧಿಕೃತವಾಗಿ ರೈತರಿಗೆ ನೋಟಿಸ್ ನೀಡಿದ್ದರೆ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ