ಶಿವರಾತ್ರಿ ಜಾಗರಣೆ ಮಾಡಿದ್ದಕ್ಕೆ ರಜೆ ಕೊಡಿ ಎಂದು ಸಿದ್ದರಾಮಯ್ಯಗೆ ಬೇಡಿಕೆಯಿಟ್ಟ ಹಿಂದೂಗಳು

Krishnaveni K

ಮಂಗಳವಾರ, 25 ಫೆಬ್ರವರಿ 2025 (15:49 IST)
ಬೆಂಗಳೂರು: ಮೊನ್ನೆಯಷ್ಟೇ ರಂಝಾನ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಸರ್ಕಾರೀ ನೌಕರರಿಗೆ ಒಂದು ಗಂಟೆ ಕೆಲಸದಿಂದ ವಿನಾಯ್ತಿ ನೀಡಿ ಎಂದು ಮನವಿ ಮಾಡಲಾಗಿತ್ತು. ಈಗ ಹಿಂದೂ ಮುಖಂಡರು ಶಿವರಾತ್ರಿಗೆ ಜಾಗರಣೆ ಮಾಡಿದ್ದಕ್ಕೆ ಮರುದಿನ ಕೆಲಸಕ್ಕೆ ರಜೆ ನೀಡಿ ಎಂದು ಮನವಿ ಮಾಡಿದ್ದಾರೆ.

ನಾಳೆ ಶಿವರಾತ್ರಿ ಹಬ್ಬವಾಗಿದೆ. ಹಲವರು ದೇವಾಲಯಗಳಿಗೆ ತೆರಳಿ ರಾತ್ರಿಯಿಡೀ ಭಜನೆ, ಪೂಜೆಯಲ್ಲಿ ಕಾಲ ಕಳೆಯುತ್ತಾರೆ. ಹೀಗಾಗಿ ಮರುದಿನ ಮತ್ತೆ ಕಚೇರಿಗೆ ತೆರಳಲು ಕಷ್ಟ. ಹೀಗಾಗಿ ಮರುದಿನ ಸರ್ಕಾರೀ ಉದ್ಯೋಗಿಗಳಿಗೆ ರಜೆ ಕೊಡಿ ಎಂದು ಕೆಲವು ಹಿಂದೂ ಮುಖಂಡರು ಸಿಎಂಗೆ ಮನವಿ ಮಾಡಿದ್ದಾರೆ.

ಶಿವರಾತ್ರಿ ಹಬ್ಬಕ್ಕೆ ಸರ್ಕಾರೀ ರಜೆಯಿಲ್ಲ. ಹಾಗಿದ್ದರೂ ಕೆಲವು ಸಂಸ್ಥೆಗಳು ಮಾತ್ರ ಸ್ವಯಂಪ್ರೇರಿತವಾಗಿ ರಜೆ ನೀಡುತ್ತವೆ. ಕೆಲವರು ರಜೆ ಹಾಕಿಯಾದರೂ ರಾತ್ರಿಯಿಡೀ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

ಹೀಗಾಗಿ ಮರುದಿನ ಸರ್ಕಾರೀ ನೌಕರರಿಗೆ ರಜೆ ನೀಡಿ ಎಂದು ಸಿಎಂ ಸಿದ್ದರಾಮಯ್ಯಗೆ ಕೆಲವರು ಮುಖಂಡರು ಮನವಿ ಮಾಡಿದ್ದಾರೆ. ಶೀಘ್ರವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ