ಬಡವರ ಸರ್ಕಾರ ಎನ್ನುತ್ತೀರಿ ನಿಮಗೆ ಮಾತ್ರ ಐಷಾರಾಮಿ ಕಾರು: ಸಿಎಂ ಸಿದ್ದರಾಮಯ್ಯ ಕಾರಿಗೆ ನೆಟ್ಟಿಗರ ಪ್ರತಿಕ್ರಿಯೆ ನೋಡಿ

Krishnaveni K

ಬುಧವಾರ, 19 ಫೆಬ್ರವರಿ 2025 (11:12 IST)
ಬೆಂಗಳೂರು: ಇತ್ತೀಚೆಗೆ ಮಂಡಿ ನೋವಿನಿಂದಾಗಿ ವೀಲ್ ಚೇರ್ ನಲ್ಲೇ ಓಡಾಡುತ್ತಿರುವ ಸಿಎಂ ಸಿದ್ದರಾಮಯ್ಯ ಈಗ ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದಾರೆ. ಆದರೆ ಅವರ ಕಾರಿನ ಬಗ್ಗೆ ನೆಟ್ಟಿಗರ ಪ್ರತಿಕ್ರಿಯೆ ನೋಡಿ.

ಯಾವತ್ತೂ ಓಡಾಡುವ ಸರ್ಕಾರಿ ಕಾರು ಬಿಟ್ಟು ಸಿದ್ದರಾಮಯ್ಯ ಈಗ ಐಷಾರಾಮಿ ಕಾರು ತರಿಸಿಕೊಂಡು ಓಡಾಡುತ್ತಿದ್ದಾರೆ. ನಿನ್ನೆ ವಿಧಾನಸೌಧಕ್ಕೆ ಸಿಎಂ ಸಿದ್ದರಾಮಯ್ಯ ಇದೇ ಖಾಸಗಿ ಕಾರಿನಲ್ಲಿ ಬಂದಿಳಿದಿದ್ದರು.

ಇದಕ್ಕೆ ಮೊದಲು ಸರ್ಕಾರೀ ಕಾರನ್ನು ಬಳಸುತ್ತಿದ್ದರು. ಆದರೆ ಆ ಕಾರಿಗೆ ಹತ್ತುವುದು ಇಳಿಯುವುದು ಸಿದ್ದರಾಮಯ್ಯಗೆ ಮಂಡಿ ನೋವಿನಿಂದಾಗಿ ತೀರಾ ಸಮಸ್ಯೆಯಾಗುತ್ತಿತ್ತಂತೆ. ಈ ಕಾರಣಕ್ಕೆ ಅವರೀಗ ಖಾಸಗಿ ಕಾರನ್ನು ಬಳಸುತ್ತಿದ್ದಾರೆ. ಒಂದು ಕೋಟಿ ರೂ. ಬೆಲೆ ಬಾಳುವ ಟಯೊಟಾ ವೆಲ್ ಫೈರ್ ಕಾರು ಬಳಸುತ್ತಿದ್ದಾರೆ. ಕೆಲವು ಸೆಲೆಬ್ರಿಟಿಗಳ ಬಳಿ ಈ ಕಾರಿದೆ.

ಈ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವುದರ ಬಗ್ಗೆ ನೆಟ್ಟಿಗರು ಕೆಲವರು ವ್ಯಂಗ್ಯ ಮಾಡಿದ್ದಾರೆ. ಮಂಡಿ ನೋವು ಎಂದು ನಿಮಗೇನೋ ಐಷಾರಾಮಿ ಕಾರಿನಲ್ಲಿ ಓಡಾಡುವ ತಾಕತ್ತಿದೆ. ಆದರೆ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರು ದಿನನಿತ್ಯದ ವೆಚ್ಚ ಸರಿದೂಗಿಸುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಬಡವರ ಸರ್ಕಾರ ಎನ್ನುತ್ತೀರಿ, ನೀವು ಮಾತ್ರ ಐಷಾರಾಮಿ ಕಾರಿನಲ್ಲಿ ಓಡಾಡುತ್ತೀರಿ ಎಂದು ಇನ್ನು ಕೆಲವರು ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ