ಬೆಂಗಳೂರು : ಹಾಲು ಹಲವು ಬಗೆಯ ಸಿಹಿತಿಂಡಿಗಳಿಗೆ ಬಳಸುತ್ತಾರೆ. ಹಾಲಿನಿಂದ ಮಾಡಿದ ಯಾವುದೇ ಸ್ಪೀಟ್ಸ್ ರುಚಿಕರವಾಗಿರುತ್ತದೆ. ಆದಕಾರಣ ಹಾಲಿನಿಂದ ಈ ರೀತಿಯಾಗಿ ಕೇಕ್ ತಯಾರಿಸಿ.
ಬೇಕಾಗುವ ಸಾಮಾಗ್ರಿಗಳು : ಹಾಲು 1 ಲೀಟರ್, ತುಪ್ಪ 1ಚಮಚ, ಸಕ್ಕರೆ 3 ಚಮಚ, ನಿಂಬೆ ಹಣ್ಣು ½ ಹೋಳು, ಏಲಕ್ಕಿ 2
ಮಾಡುವ ವಿಧಾನ : ಹಾಲು ಕಾಯಿಸಿ ನಿಂಬೆ ರಸ ಮಿಕ್ಸ್ ಮಾಡಿದಾಗ ಹಾಲು ಒಡೆದು ನೀರು, ಪನ್ನೀರು ಬೇರೆ ಬೇರೆಯಾಗುತ್ತದೆ. ಇದರಲ್ಲಿರುವ ನೀರನ್ನು ತೆಗೆದು ಮತ್ತೆ ಸ್ವಲ್ಪ ನೀರು ಹಾಕಿ ಕಾಯಿಸಿ. ಅದಕ್ಕೆ ಸಕ್ಕರೆ ಮತ್ತು ತುಪ್ಪ ಸೇರಿಸಿ ಕುದಿಸಿ. ಅದು ಗಟ್ಟಿಯಾದ ಬಳಿಕ ಅದನ್ನು ಕೆಳಗಿಳಿಸಿ ಏಲಕ್ಕಿ ಪುಡಿ ಮಿಶ್ರಣ ಮಾಡಿ. ತುಪ್ಪ ಸವರಿದ ೊಂದು ಪಾತ್ರೆಗೆ ಸುರಿಯಿರಿ. ಸ್ವಲ್ಪ ಹೊತ್ತು ಆರಲು ಬಿಟ್ಟು ಆಮೇಲೆ ಕತ್ತರಿಸಿದರೆ ಹಾಲಿನ ಕೇಕ್ ರೆಡಿ.