ಗೃಹಿಣಿ ನೇಣಿಗೆ ಶರಣು- ಪತಿ ಮೇಲೆ ಕೊಲೆ ಆರೋಪ

ಶನಿವಾರ, 1 ಏಪ್ರಿಲ್ 2023 (13:50 IST)
ವಿವಾಹಿತ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮೃತಳಾಗಿರೋ ಘಟನೆ ನಗರ ಸುಬ್ರಮಣ್ಯ ಪುರ ಠಾಣ ವ್ಯಾಪ್ತಿಯ ಪೂರ್ಣಪ್ರಜ್ಞ ಬಡವಾಣೆಯಲ್ಲಿ ನಡೆದಿದೆ.ಮಹಿಳೆಯ ಪೋಷಕರು ಪತಿಯೇ ಕೊಲೆಗೈದು ನೇಣು ಹಾಕಿರೋದಾಗಿ ಆರೋಪಿಸಿದ್ದಾರೆ. 32 ವರ್ಷದ ರಶ್ಮಿ ಮೃತಪಟ್ಟ ಗೃಹಿಣಿಯಾಗಿದ್ದು,ರಶ್ಮಿ ವಾಸವಿದ್ದ  ರೂಂನಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಶವ  ಪತ್ತೆಯಾಗಿದ್ದು, ಕಳೆದ ೧೦ ವರ್ಷಗಳ ಹಿಂದೆ ರಶ್ಮಿ ಅರವಿಂದ್ ಮದುವೆಯಾಗಿತ್ತು.ಖಾಸಗಿ ಕಂಪನಿಯ ಇಂಜಿನಿಯರ್ ಆಗಿದ್ದ ಅರವಿಂದ್  ಇಬ್ಬರಿಗೂ ಐದು ವರ್ಷದ ಗಂಡು ಮಗು ಇದೆ.ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತಿದ್ದ ರಶ್ಮಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದ್ರೆ ಕುಟುಂಬಸ್ಥರು ಮಾತ್ರ.ರಶ್ಮಿ ಸಾವಿಗೆ ಅರವಿಂದ್ ಕಾರಣ ಅಂತ ಆರೋಪಿಸಿದ್ದಾರೆ.ಸುಬ್ರಮಣ್ಯಪುರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ‌ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ