ಈ ಬಾರಿ ರೈತ ಬಂಡಾಯದ ವರ್ಷಾಚರಣೆ ಮಾಡಿದ್ದು ಹೇಗೆ ಗೊತ್ತಾ?

ಶನಿವಾರ, 21 ಜುಲೈ 2018 (18:33 IST)
ಉತ್ತರ ಕರ್ನಾಟಕd ಬಹುದಿನಗಳ ಬೇಡಿಕೆಯಾದ ಕಳಸಾ- ಬಂಡೂರಿ ಮಹಾದಾಯಿ ಹೋರಾಟ ಈಗಾಗಲೇ ಮೂರು ವರ್ಷ ಪೂರೈಸಿ ನಾಲ್ಕನೆ ವರ್ಷಕ್ಕೆ ಕಾಲಿಟ್ಟಿದೆ. ಹೋರಾಟ ಮಾತ್ರ ನಿರಂತರ ಮುಂದುವರೆದಿದೆ. ಆದರೆ ರೈತನ ಸಮಸ್ಯೆ ಈವರೆಗೂ ಬಗೆಹರಿದಿಲ್ಲ. ಇದರ ಬೆನ್ನಲ್ಲೆ  ರೈತ ಬಂಡಾಯದ 38ನೇ ವರ್ಷಾಚರಣೆ ಹಿನ್ನಲೆಯಲ್ಲಿ ಗದಗ ನಗರದಲ್ಲಿ ಮಹಾದಾಯಿ ಹೋರಾಟಗಾರರು ದೀರ್ಘದಂಡ ಪ್ರದಕ್ಷಿಣಿ ಹಾಕಿದ್ದಾರೆ.  

ಮೂಲಕ ಕಳಸಾ- ಬಂಡೂರಿ ಮಹಾದಾಯಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ನಗರದ ಭೂಮರೆಡ್ಡಿ ವೃತ್ತದಿಂದ ವೀರೇಶ್ವರ ಪುಣ್ಯಾಶ್ರಮದವರೆಗೂ ದೀಡ್ ನಮಸ್ಕಾರ ಹಾಕಿದ ಹೋರಾಟಗಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಬಂಡಾಯ ಆಚರಣೆ ಹಾಗೂ ಕಳಸಾ ಬಂಡೂರಿ ಜಾರಿಗೆ ಒತ್ತಾಯಿಸಿ ಹೋರಾಟಗಾರರು ದೀಡ್ ನಮಸ್ಕಾರ ಕೈಗೊಂಡರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ