ಕೊರೊನಾ ವಾರಿಯರ್ಸ್ ಗಳ ಮೇಲೆ ಊರಿನ ಮಂದಿ ಚೆಲ್ಲಿದ್ದೇನು?

ಗುರುವಾರ, 16 ಏಪ್ರಿಲ್ 2020 (14:47 IST)
ನಮ್ಮ ಸುರಕ್ಷತೆಗಾಗಿ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ಗಳ ಮೇಲೆ ಊರಿನ ಜನರು ಇವನ್ನು ಚೆಲ್ಲಿ ಖುಷಿಪಟ್ಟಿದ್ದಾರೆ.

ಕೊರೊನಾ ವಾರಿಯರ್ಸ್ ಗಳಾದ ಆಶಾ, ಅಂಗನವಾಡಿ‌ ಕಾರ್ಯಕರ್ತರು, ಆರೋಗ್ಯ, ಕಂದಾಯ  ಮತ್ತು  ಪೊಲೀಸ್ ಇಲಾಖೆಯ ಸಿಬ್ಬಂದಿಯ ಆತ್ಮ ಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಬಳ್ಳಾರಿ ‌ನಗರದ ಹೊರ ವಲಯದ ಗುಗ್ಗರಟ್ಟಿಯಲ್ಲಿ  ಅವರಿಗೆ ಹೂ ಮಳೆ ಗರೆದು ಜನ ಅಭಿಮಾನ ಪೂರ್ವಕ ಸನ್ಮಾನ ಗೌರವ ಅರ್ಪಣೆ ಮಾಡಿದರು.

ಗುಗ್ಗರಹಟ್ಟಿಯಲ್ಲಿ ಓರ್ವ ವ್ಯಕ್ತಿಗೆ  ಕೊರೊನಾ ಪಾಸಿಟಿವ್ ಬಂದ ಮೇಲೆ ಆ ಪ್ರದೇಶವನ್ನು ಕಂಟೈನ ಮೆಂಟ್ ಝೋನ್ ಆಗಿ‌ ಪರಿವರ್ತಿಸಿ, ಅಲ್ಲಿನ ಪ್ರತಿ‌ಮನೆಯ ವ್ಯಕ್ತಿಗಳ‌ ಪರೀಕ್ಷೆ ನಡೆಸಿದ್ದಲ್ಲದೆ ಸೋಂಕು‌ ಹರಡದಂತೆ ಸ್ಯಾನಿಟೈಜೇಷನ್ ಮಾಡಲಾಗಿದೆ.

ಜನ ಸಂಚಾರ ನಿಯಂತ್ರಿಸಿದೆ. ಹೀಗಾಗಿ ಇಲ್ಲಿ ‌ಸೋಂಕು‌ ಮತ್ತೆ ಉಲ್ಬಣಿಸದಂತೆ ಅವರೆಲ್ಲ ಕಾರ್ಯ ನಿರ್ವಹಿಸಿದ್ದಾರೆ.
ಪ್ರತಿ‌ ದಿನದಂತೆ ಮನೆ ಮನೆಗೆ ಪರಿಶೀಲನೆಗೆ  ಬಂದಾಗ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಆರತಿ ಬೆಳಗಿ ಪುಷ್ಪರ್ಚನೆ ಮಾಡಿದ್ದಾರೆ ಗ್ರಾಮಸ್ಥರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ