ನಕಲಿ ದಾಖಲೆ ಸೃಷ್ಟಿಸಿ ಇಡೀ ಗ್ರಾಮದ ಜಾಗವನ್ನೇ ಇ ಖಾತೆ ಮಾಡಿಕೊಟ್ಟ ಗ್ರಾಮ ಪಂಚಾಯತಿ ವಿರುದ್ಧ ಭಾರೀ ಅವ್ಯವಹಾರದ ಆರೋಪ ಕೇಳಿಬಂದಿದೆ.
ಸರ್ಕಾರಿ ಜಾಗ, ಗೋಮಾಳದ ಜಾಗಗಳನ್ನು ಭೂಗಳ್ಳರು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಶಪಡಿಸಿಕೊಳ್ಳದನ್ನ ನಾವು ಸಾಕಷ್ಟು ಕಡೆಗಳಲ್ಲಿ ನೋಡಿರ್ತಿವಿ. ಆದ್ರೆ ಇಲ್ಲೊಂದು ಗ್ರಾಮ ಪಂಚಾಯಿತಿ ಅಧಿಕಾರಿಗಳೇ ನೂರಾರು ಬಡ ದಲಿತರು ವಾಸ ಮಾಡುತ್ತಿದ್ದ 11,000 ಅಡಿಯಷ್ಟು ಗ್ರಾಮದ ಜಾಗವನ್ನೇ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಬೇರೊಬ್ಬರಿಗೆ ಇ ಖಾತೆ ಮಾಡಿ ಕೊಟ್ಟಿದ್ದಾರೆ.
ಅಲ್ಲಿನ 80 ಕ್ಕೂ ಹೆಚ್ಚು ಬಡ ಕುಟುಂಬಗಳನ್ನು ಖಾತೆದಾರ ಒಕ್ಕಲೆಬ್ಬಿಸಲು ಮುಂದಾಗಿದ್ದು, ನೂರಾರು ವರ್ಷಗಳಿಂದ ಅಲ್ಲಿಯೇ ವಾಸ ಮಾಡಿಕೊಂಡಿದ್ದ ಕುಟುಂಬಗಳು ರೊಚ್ಚಿಗೆದ್ದು ಗ್ರಾಮ ಪಂಚಾಯತಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಜನರು ಪ್ರತಿಭಟನೆ ನಡೆಸಿದ್ದಾರೆ.