ಇಂಥ ಮಾವು ಖರೀಸಿದರೆ ಡೇಂಜರ್

ಶನಿವಾರ, 9 ಮೇ 2020 (14:38 IST)
ಮಾರುಕಟ್ಟೆಯಲ್ಲಿ ಇದೀಗ ಹಣ್ಣುಗಳ ರಾಜ ಮಾವಿನ ಸುಗ್ಗಿ. ತರಹೇವಾರಿ ತಳಿಯ ಮಾವು ಮಾರುಕಟ್ಟೆಗೆ ಬಂದಿದೆ. ಆದರೆ ಖರೀದಿ ಮಾಡೋಕೆ ವೈದ್ಯರು ಎಚ್ಚರಿಕೆ ಕೊಟ್ಟಿದ್ದಾರೆ.

ರಾಸಾಯನಿಕ (Calcium Carbide) ಬಳಸಿ ಕೃತಕವಾಗಿ ಮಾವಿನ ಹಣ್ಣುಗಳನ್ನು ಸಂಗ್ರಹಣೆ, ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ವ್ಯಾಪಾರಸ್ಥರು ರಾಸಾಯನಿಕ (Calcium Carbide) ಬಳಸಿ ಕೃತಕವಾಗಿ ಮಾವಿನ ಹಣ್ಣುಗಳನ್ನು ಸಂಗ್ರಹಣೆ ಮತ್ತು ಮಾರಾಟ ಮಾಡದಂತೆ ಹಾಗೂ ಸಾರ್ವಜನಿಕರು ರಾಸಾಯನಿಕ (Calcium Carbide) ಬಳಸಿ ಕೃತಕವಾಗಿ ಮಾಡಿದ ಮಾವಿನ ಹಣ್ಣುಗಳನ್ನು ಕೊಂಡುಕೊಳ್ಳದಂತೆ ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ ಮತ್ತು ನಿಬಂಧನೆ 2011 ರ Prohibition and Restriction on sales of certain products  2.3.5 ಪ್ರಕಾರ ರಾಸಾಯನಿಕ (Calcium Carbide) ಬಳಸಿ ಕೃತಕವಾಗಿ ಮಾವಿನ ಹಣ್ಣುಗಳನ್ನು ಸಂಗ್ರಹಣೆ ಅಥವಾ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

ಈ ನಿಯಮ ಉಲ್ಲಂಘನೆ ಮಾಡುವವರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಸೆಕ್ಷನ್ 58 ರ ಪ್ರಕಾರ ಎರಡು ಲಕ್ಷದವರೆಗೆ ದಂಡ ಹಾಗೂ ಸೆಕ್ಷನ್ 59 ರ ಪ್ರಕಾರ ಆರು ತಿಂಗಳುಗಳವರೆಗೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ