‘ನಾನು ಬಿಜೆಪಿ ಮೇಲೆ ಬ್ಲೇಮ್ ಗೇಮ್ ಮಾಡ್ತಿಲ್ಲ. ಆಧಾರ ಇಟ್ಟುಕೊಂಡೆ ಹೇಳಿದ್ದೀನಿ’- ಸಿದ್ದರಾಮಯ್ಯ
ಬುಧವಾರ, 2 ಜನವರಿ 2019 (09:12 IST)
ಬೆಂಗಳೂರು : ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ ಆಮಿಷ ವಿಚಾರಕ್ಕೆ ಸಂಬಂಧಿಸಿದಂತೆ ‘ನಾನು ಬಿಜೆಪಿ ಮೇಲೆ ಬ್ಲೇಮ್ ಗೇಮ್ ಮಾಡ್ತಿಲ್ಲ. ಆಧಾರ ಇಟ್ಟುಕೊಂಡೆ ಹೇಳಿದ್ದೀನಿ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು, ‘ಕಾಂಗ್ರೆಸ್ ಶಾಸಕರನ್ನು ಬಿಜೆಪಿಯವರು ಖರೀದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಬಿಜೆಪಿಯವರು ಸಿದ್ದರಾಮಯ್ಯ ಅವರು ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು,’ ನಾನು ಬಿಜೆಪಿ ಮೇಲೆ ಬ್ಲೇಮ್ ಗೇಮ್ ಮಾಡ್ತಿಲ್ಲ. ಆಧಾರ ಇಟ್ಟುಕೊಂಡೆ ಹೇಳಿದ್ದೀನಿ. ಶಾಸಕ ಬಿ.ಸಿ.ಪಾಟೀಲ್ ಗೆ ಆಫರ್ ಕೊಟ್ಟಿರಲಿಲ್ವಾ? ಸಮಯ ಬರಲಿ, ಇನ್ನೂ ಕೆಲವರಿಂದ ಈ ವಿಚಾರ ಬಹಿರಂಗ ಪಡಿಸುವೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.