ಕಾರ್ಪೊರೇಟರ್ ಕಿರುಕುಳ ಸಹಿಸಲಾಗದೆ ಮಹಿಳಾ ವಕೀಲೆ ಆತ್ಮಹತ್ಯೆಗೆ ಶರಣು

ಬುಧವಾರ, 2 ಜನವರಿ 2019 (07:08 IST)
ಬೆಂಗಳೂರು : ಕಾರ್ಪೊರೇಟರ್ ಕಿರುಕುಳಕ್ಕೆ ಬೇಸತ್ತು ಯುವ ಮಹಿಳಾ ವಕೀಲೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯ ನಾರಾಯಣಪುರ ವಾರ್ಡ್ನ ಕಾರ್ಪೊರೇಟರ್ ಸುರೇಶ್ ಎಂಬುವವರು ಸೈಟು ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸುತ್ತಿದ್ದ ವಕೀಲೆ ಧರಣಿ ಎಂಬಾಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಮನನೊಂದು ಧರಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಈ ಘಟನೆಗೆ ಸಂಬಂಧಿಸಿದಂತೆ ಆಕೆಯ ಪೋಷಕರು ಮಗಳ ಸಾವಿಗೆ ಕಾರ್ಪೊರೇಟರ್ ಸುರೇಶ್ ಕಾರಣವೆಂದು ಆರೋಪಿಸಿ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ