ಯೋಗೀಶ್ವರ್ ಸಚಿವರಾಗುತ್ತಾರೆ ಒಳ್ಳೆದಾಗಲಿ ಯೋಗೀಶ್ವರ್ ಕಂಡ್ರೆ ಭಯ ಅಲ್ವಾ ಎಲ್ಲಿ ಏನ್ ಬಿಟ್ಟು ಬಿಡ್ತಾರೋ ಅಂತಾ ಸಂಸದ ಡಿ.ಕೆ.ಸುರೇಶ್ ಯೋಗೀಶ್ವರ್ ವಿರುದ್ಧ ವ್ಯಂಗ್ಯ ಮಾಡಿದ್ರು.
ರಾಮನಗರ ಜಿಲ್ಲೆ ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕವಿ ಡಾ.ಸಿದ್ದಲಿಂಗಯ್ಯ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ರು.
ವೇದಿಕೆಯಲ್ಲಿ ಸ್ವಾಮೀಜಿಗಳು ಸಿಪಿವೈ ಸಚಿವರಾಗುತ್ತಾರೆ ಅಂತಾ ಹೇಳಿದ್ರು ಹಾಗಾಗಿ ನಾನು ಒಳ್ಳೆದಾಗಲಿ ಅಂದೆ ಅಂತಾ ತಮ್ಮ ಬದ್ದ ವೈರಿ ಯೋಗೀಶ್ವರ್ ಗೆ ನಗುತ್ತಲೆ ಡಿ.ಕೆ.ಸುರೇಶ್ ಕುಟುಕಿದ್ರು. ಇನ್ನೂ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸಾರ್ವಜನಿಕರ ಬದುಕಿನ ಬಗ್ಗೆ ಕಾಳಜಿ ಇಲ್ಲಾ, ಪ್ರತಿಯೊಂದು ಹಂತದಲ್ಲಿ ಬೆಲೆ ಏರಿಕೆ ಕಡಿಮೆ ಮಾಡುವುದು ಸರಕಾರದ ಕರ್ತವ್ಯ, ತೆರಿಗೆ ಕಡಿಮೆ ಮಾಡಿ ಜನ್ರ ಮೇಲೆ ಆಗುತ್ತಿರುವ ಬೆಲೆ ಏರಿಕೆಯನ್ನ ಕಡಿಮೆ ಮಾಡುವುದು ಸರಕಾರದ ಕರ್ತವ್ಯ, ಮನ್ ಕೀ ಭಾತ್ ನಲ್ಲಿ ಮೋದಿ ಕೂತು ಪ್ರಚಾರ ಪಡೆಯುವುದನ್ನ ಬಿಡಬೇಕು ಅಂತಾ ಲೇವಡಿ ಮಾಡಿದ್ರು.
ಜನಾಶೀರ್ವಾದ ಯಾತ್ರೆ ಹೆಸರಿನಲ್ಲಿ ಏನ್ ಸಾಧನೆ ಮಾಡೊದ್ದೀವಿ ಅಂತಾ ಪ್ರಚಾರ ಪಡೆಯುತ್ತಿದ್ದಾರೊ ಗೊತ್ತಿಲ್ಲ, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ನಿಯಂತ್ರಿಸಲು ವಿಫಲರಾಗಿದ್ದಾರೆ, ಹಿಂದಿನ ಸರಕಾರಗಳು ಸಬ್ಸಿಡಿಗಳನ್ನ ನೀಡುತ್ತ ಬಂದಿವೆ ಆದ್ರೆ ಈ ಬಿಜೆಪಿ ಸರಕಾರ ಸಬ್ಸಿಡಿ ತಗೆದು ಬೆಲೆ ಏರಿಕೆ ಮಾಡುತ್ತಿದ್ದಾರೆ, ಕೇಂದ್ರ ಸರಕಾರ ೪-೫ ಕಂಪನಿಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡು ದೇಶವನ್ನ ಅಡ ಇಡುವ ಪರಿಸ್ಥಿತಿಗೆ ಹೋಗುತ್ತಿದ್ದೇವೆ ಅಂತಾ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ರು.