ಗಣೇಶ ಹಬ್ಬ ಆಚರಣೆ ಬಗ್ಗೆ ಸೆ.5ಕ್ಕೆ ತೀರ್ಮಾನ: ಸಚಿವ ನಾರಾಯಣ್

ಮಂಗಳವಾರ, 31 ಆಗಸ್ಟ್ 2021 (16:08 IST)
ಗಣೇಶ ಹಬ್ಬಕ್ಕೆ ಅನುಮತಿ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ. ಸೆಪ್ಟೆಂಬರ್ 5 ರಂದು ಸಭೆ ಮಾಡಿ ನಿಶ್ಚಯ ಮಾಡುತ್ತೇವೆ ಅಂತಾ ಸಚಿವ ಡಾ.ಸಿ.ಎನ್.ನಾರಾಯಣ್ ತಿಳಿಸಿದ್ರು.
ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ನಿರ್ಮಾಣ ಮಾಡಿದ್ದ ಆಕ್ಸಿಜನ್ ಘಟಕ ಉದ್ಘಾಟಿಸಿ ಮಾತನಾಡಿದ್ರು. ಕೋವಿಡ್ ಸೋಂಕಿನ‌ ಸಂಖ್ಯೆ ಯಾವ ಮಟ್ಟದಲ್ಲಿ ಇರಲಿದೆ  ಎಂಬುದನ್ನು ನೋಡಬೇಕಿದೆ, ಎಲ್ಲರಿಗೂ ಗಣೇಶ ಹಬ್ಬ ಆಚರಣೆ ಮಾಡಬೇಕೆಂದು ಬಹಳಷ್ಟು ಆಸಕ್ತಿ ಇರುತ್ತದೆ, ಕಳೆದ ವರ್ಷವೂ ಹಬ್ಬ ಸರಿಯಾಗಿ ಆಗಿಲ್ಲ, ಈ ವರ್ಷವೂ ಹಬ್ಬ ಆಚರಣೆಯಾಗಿಲ್ಲ ಅನ್ನೋದು ಇರುತ್ತದೆ, ವಿಘ್ನೇಶ್ವರ ಕೋವಿಡ್ ತಗೆದು ಹಾಕಲಿ ಎಂದು ಪ್ರಾರ್ಥನೆ ಮಾಡುವುದು ಎಲ್ಲರ ಅಪೇಕ್ಷೆ ಆಗಿದೆ, ಮುಖ್ಯಮಂತ್ರಿಗಳೇ ಆಸಕ್ತಿ ತಗೆದುಕೊಂಡು ಸಮಾಲೋಚನೆ ಮಾಡಿ ತೀರ್ಮಾನ ತಗೆದುಕೊಳ್ಳುತ್ತಾರೆ ಅಂತಾ ಡಾ.ಅಶ್ವಥ್ ನಾರಾಯಣ್ ಹೇಳಿದ್ರು.

ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ಎಂ.ರುದ್ರೇಶ್ ಮಾತನಾಡಿ ಕೊರೋನಾ ಬಂದ ಹಿನ್ನೆಲೆಯಲ್ಲಿ ಆಕ್ಸಿಜನ್ ಅವಶ್ಯಕತೆ ಇತ್ತು, ಹಾಗಾಗಿ ನಮ್ಮ ಇಲಾಖೆಯಿಂದ ರಾಮನಗರದಲ್ಲಿ ಎರಡು ಕಡೆ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗಿದೆ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಸಲಹೆ ಮೇರೆಗೆ ನಿರ್ಮಾಣ ಮಾಡಲಾಗಿದೆ ಅಂತಾ ಹೇಳಿದ್ರು. ಕೆ.ಆರ್.ಐ.ಡಿ.ಎಲ್ ಸಿ.ಎಸ್.ಆರ್.ಫಂಡ್ ನಲ್ಲಿ ರಾಜ್ಯದ ವಿವಿಧ ಕಡೆ 10 ಕಡೆ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದೆ ಎಂದ ಅವರು ಜಿಲ್ಲೆಯ 5 ಪ್ರಾಧಿಕಾರಗಳಿಂದ ಜಿಲ್ಲಾ ಆಸ್ಪತ್ರೆಗಳಿಗೆ 7 ಕೋಟಿ ರೂ ಹಣವಮ್ನ ಸಿ.ಎಸ್.ಆರ್ ಫಂಡ್‌ ನಿಂದ ಕೊಡಲಾಗಿದೆ ಅಂತಾ ಎಂ.ರುದ್ರೇಶ್ ತಿಳಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ